ಪ್ರೀತಿಗೆ ಪೋಷಕರ ವಿರೋಧ: ಪ್ರೇಮಿಗಳಿಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆ

ಕೋಲಾರ,ಸೆಪ್ಟಂಬರ್,25,2025 (www.justkannada.in): ಪ್ರೀತಿಗೆ ಪೋಷಕರ ವಿರೋಧ ಹಿನ್ನೆಲೆಯಲ್ಲಿ ರೈಲಿಗೆ ಸಿಲುಕಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಸತೀಶ್ (18) ಹಾಗೂ 17 ವರ್ಷದ ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾದವರು.  ಕೋಲಾರದ ಮಾಲೂರಿನ ಬ್ಯಾಟರಾಯನಹಳ್ಳಿಯಲ್ಲಿ ಈ ಘಟನೆ ನಡೆದಿದೆ.  ಕಳೆದ ಒಂದು ವರ್ಷದಿಂದ ಸತೀಶ್ ಮತ್ತು  17 ವರ್ಷದ ಅಪ್ರಾಪ್ತೆ ಪರಸ್ಪರ ಪ್ರೀತಿಸುತ್ತಿದ್ದರು.

ಈ ಮಧ್ಯೆ ಅನ್ಯಜಾತಿ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು ಇದರಿಂದ ಮನನೊಂದ ಪ್ರೇಮಿಗಳು  ಬೆಂಗಳೂರಿಗೆ ತೆರಳುವವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಸತೀಶ್ ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದನು. ಸ್ಥಳಕ್ಕೆ ಪೊಲೀಸರು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Parent, opposition , love, Lovers, Suicide