ಪ್ರೇಮಿಗಳ ನಡುವೆ ಗಲಾಟೆ: ಕೊಲೆಯಲ್ಲಿ ಅಂತ್ಯ.

ಬೆಂಗಳೂರು,ನವೆಂಬರ್,30,2022(www.justkannada.in): ಪ್ರೇಮಿಗಳ ನಡುವೆ ಗಲಾಟೆ ನಡೆದು ಪ್ರೇಯಸಿಯನ್ನ ಪ್ರಿಯಕರನೇ ಕೊಂದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳರಿನ  ಟಿಸಿ ಪಾಳ್ಯದಲ್ಲಿ ಈ ಘಟನೆ ನಡೆದಿದೆ.  ನೇಪಾಳ ಮೂಲದ ಕೃಷ್ಣಕುಮಾರಿ23) ಹತ್ಯೆಯಾದ ಯುವತಿ.. ಪ್ರಿಯಕರ ಸಂತೋಷ್ ದಾಮಿ(27) ಎಂಬಾತನೇ ತನ್ನ ಪ್ರೇಯಸಿಯನ್ನ ಹತ್ಯೆಗೈದಿದ್ದಾನೆ.

ಕೃಷ್ಣಕುಮಾರಿ ಮತ್ತು ಸಂತೋಷ್ ಇಬ್ಬರು  ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು.   ಕೃಷ್ಣ ಕುಮಾರಿ ಸ್ಪಾ ಒಂದರಲ್ಲಿ ಬ್ಯುಟಿಷಿಯನ್  ಆಗಿ ಕೆಲಸ ನಿರ್ವಹಿಸುತ್ತಿದ್ದಳು.ಸಂತೋಷ್ ಸಲೂನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಇಬ್ಬರ ನಡುವೆ ಪ್ರೇಮಾಂಕುರವಾಗಿ ಇಬ್ಬರು ಬಾಡಿಗೆ ಮನೆಯಲ್ಲಿ ಇದ್ದರು.

ಇಂದು ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೇ ಪ್ರಿಯತಮೆ ಕೃಷ್ಣಕುಮಾರಿ ತಲೆಯನ್ನು ಗೋಡೆಗೆ ಗುದ್ದಿ ಸಂತೋಷ್  ಕೊಲೆ  ಮಾಡಿದ್ದಾನೆ. ಈ ಕುರಿತು ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: lovers-murder- ends-banglore