ಡಬಲ್ ಡೆಕ್ಕರ್ ಸರ್ಕಾರ ಎಲ್ಲಾ ರೀತಿಯಲ್ಲೂ ವಿಫಲ- ಮಾಜಿ ಸಂಸದ ವಿ.ಎಸ್ ಉಗ್ರಪ್ಪ ವಾಗ್ದಾಳಿ.

ಮೈಸೂರು,ನವೆಂಬರ್,31,2022(www.justkannada.in): ಬಿಜೆಪಿ ಎಲ್ಲರಂಗಗಳಲ್ಲೂ ವಿಫಲರಾಗಿದ್ದಾರೆ. ಡಬಲ್ ಡೆಕ್ಕರ್ ಸರ್ಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ ಎಂದು ಮಾಜಿ ಸಂಸದ , ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಪ್ರಧಾನಿ ಮೋದಿ ಮತ್ತು ಬೊಮ್ಮಾಯಿ ಸರ್ಕಾರದ ವಿರುದ್ಧ ಕಿಡಿಕಾರಿದ ವಿ.ಎಸ್ ಉಗ್ರಪ್ಪ, ರಾಜ್ಯದಲ್ಲಿ ಈಗಾಗಲೇ ಚುನಾವಣೆ ಯುದ್ಧದ ಕಾರ್ಮೋಡಗಳು ಕಾಣುಸುತ್ತಿವೆ. ಮುಖ್ಯಮಂತ್ರಿ ರಾಜ್ಯದ ಆಡಳಿತ ಮರೆತಿದ್ದಾರೆ. ಅವರು ಮತ್ತು ಅವರ ಮಂತ್ರಿ ಮಂಡಲ ಚುನಾವಣೆಯನ್ನ ಹೇಗೆ ಎದುರಿಸೋದು ಅನ್ನೋದರಲ್ಲಿ ಬ್ಯುಸಿಯಾಗಿದ್ದಾರೆ. ಡಬಲ್ ಡೆಕ್ಕರ್ ಸರ್ಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ. ಕೇಂದ್ರ ಸರ್ಕಾರದಲ್ಲಿ ಮೋದಿ ಕೊಟ್ಟ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಲಿಲ್ಲ. ಪದೇ ಪದೇ ರಾಮನ ಬಗ್ಗೆ ಮಾತಾನಾಡುತ್ತಾರೆ. ರಾಮನಿಗೆ ನಿಜವಾಗಿ ದ್ರೋಹ ಮಾಡಿದ ವ್ಯಕ್ತಿ ಈ ದೇಶದಲ್ಲಿ ಇದ್ದರೆ ಅದರಲ್ಲಿ ನಂಬರ್ ಒನ್ ಮೋದಿ ಎಂದು ಗುಡುಗಿದರು.

ಬಿಜೆಪಿ ಎಲ್ಲರಂಗಗಳಲ್ಲೂ ವಿಫಲರಾಗಿದ್ದಾರೆ. ಹಾಗಾಗಿ ಅಧಿಕಾರ ಹಿಡಿಯಲು ವಾಮಾಮಾರ್ಗ ಹಿಡಿಯುತ್ತಿದ್ದಾರೆ. 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ  ಬಿಜೆಪಿ ಸೋಲೋದು ನೂರಕ್ಕೆ ನೂರು ಗ್ಯಾರೆಂಟಿ. ಗೋಡೆ ಬರಹಗಳಷ್ಟೇ ಸತ್ಯ. ಕೇಂದ್ರದಲ್ಲೂ 2024 ರ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ನೇತೃತ್ವದ ಸರ್ಕಾರ ಬರುತ್ತದೆ. ಬಿಜೆಪಿ ಶತಯಾ ಗತಾಯ ಗೆಲ್ಲಲು ವಾಮಾ ಮಾರ್ಗ, ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಅನೈತಿಕತೆಯಿಂದ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ. 40 ಪರ್ಸೆಂಟ್ ಸರ್ಕಾರ, ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ಭ್ರಷ್ಟಾಚಾರ ಸೇರಿದಂತೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೊಮ್ಮಾಯಿ ಅವರು ರಾಜ್ಯದಲ್ಲಿ ಕಾಮನ್ ಸಿವಿಲ್ ಕೋಡ್ ಜಾರಿ ಮಾಡುತ್ತೇವೆ ಎನ್ನುತ್ತಿದ್ದಾರೆ . ತಾಕತ್ತಿದ್ದರೆ ಪಾರ್ಲಿಮೆಂಟ್ ನಲ್ಲಿ ತರಲು ನಿಮ್ಮ ಮೋದಿಜೀಗೆ ಹೇಳಿ. ನಿಮ್ಮ ಸರ್ಕಾರದ ಸಚಿವ ಸಂಪುಟದಲ್ಲಿ ಹಲವರ  ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ಅದನ್ನ ಮುಚ್ಚಿ ಹಾಕಲು ಇಂಜೆಕ್ಷನ್ ಆರ್ಡರ್ ತೆಗೆದುಕೊಂಡಿದ್ದಾರೆ ಎಂದು ಹರಿಹಾಯ್ದರು.

Key words: double-decker- government -failed -Former MP -V.S Ugrappa