ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದ ಲವ್ ಮಾಕ್ಟೇಲ್ 2 !

ಬೆಂಗಳೂರು, ಆಗಸ್ಟ್ 13, 2021 (www.justkannada.in): ಲವ್ ಮಾಕ್ಟೇಲ್ 2 ನೇ ಭಾಗದ ಚಿತ್ರೀಕರಣ ಪೂರ್ಣಗೊಂಡು ಕುಂಬಳಕಾಯಿ ಒಡೆದಿದೆ ಚಿತ್ರತಂಡ.

ಹೌದು. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸುತ್ತಿರುವ ಲವ್ ಮಾಕ್ಟೇಲ್ 2 ನೇ ಭಾಗದ ಶೂಟಿಂಗ್ ಪೂರ್ಣಗೊಂಡಿದೆ.

ಈ ವಿಷಯವನ್ನು ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ವರ್ಷವೇ ಈ ಚಿತ್ರವೂ ತೆರೆ ಕಾಣಲಿದೆ.

ಲವ್ ಮಾಕ್ಟೇಲ್ 1 ರಲ್ಲಿ ನಟಿಸಿದ್ದ ಅದೇ ತಂಡ ಇಲ್ಲೂ ಕೆಲಸ ಮಾಡಿದೆ. ಈಗಾಗಲೇ ಹಾಡೂ ಬಿಡುಗಡೆಯಾಗಿದೆ.

ಲವ್ ಮಾಕ್ಟೇಲ್ ಕೃಷ್ಣ ಹಾಗೂ ಮಿಲನಾಗೆ ಸಾಕಷ್ಟು ಹೆಸರು ತಂದುಕೊಟ್ಟ ಸಿನಿಮಾ. ಇದರ ಮುಂದುವರಿದ ಭಾಗವೂ ಸಾಕಷ್ಟು ಕುತೂಹಲ ಮೂಡಿಸಿದೆ.