ತೆರೆ ಮೇಲೆ ಧೂಳ್ ಎಬ್ಬಿಸಲು ರೆಡಿಯಾದ ಜೋಗಿ ಪ್ರೇಮ್-ಧ್ರುವ ಸರ್ಜಾ !

ಬೆಂಗಳೂರು, ಆಗಸ್ಟ್ 13, 2021 (www.justkannada.in): ಜೋಗಿ ಪ್ರೇಮ್ ಅವರು ಹೊಸ ಸಿನಿಮಾ ಮಾಡಲು ತಯಾರಾಗಿದ್ದು, ಇದಕ್ಕೆ ಧ್ರುವ ಸರ್ಜಾ ಸಾಥ್ ನೀಡಲಿದ್ದಾರೆ.

‘ಏಕ್ ಲವ್ ಯಾ’ ಚಿತ್ರದ ಜೊತೆ ಪ್ರೇಮ್ ಮತ್ತೊಂದು ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪೊಗರು ನಂತರ ಧ್ರುವಾ ಪ್ರೇಮ್ ಕೆಲಸ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಅಗಸ್ಟ್ ಮೊದಲನೇ ವಾರದಲ್ಲಿಯೇ ಪ್ರೇಮ್ ನೇರವೇರಿಸಿದ್ದರು. ಇದೀಗ ಅದರ ಕೆಲಸಗಳಲ್ಲಿ ಬ್ಯುಸಿಯಗಿದ್ದಾರೆ.

ಧ್ರುವಾ ಸರ್ಜಾ ಸಹ ಪ್ರೇಮ್ ಮೇಲೆ ನಿರೀಕ್ಷೆ ಇಟ್ಟು ಈ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದು ಪ್ರೇಮ್ ಹಾಗೂ ಧ್ರುವ ಇಬ್ಬರೂ ಅಭಿಮಾನಿಗಳಿಗೂ ಖುಷಿ ತಂದಿದೆ.

ಕೆವಿಎನ್ ಪ್ರೋಡಕ್ಷನ್ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಇದೇ ತಿಂಗಳಿನಲ್ಲಿ ಟೈಟಲ್ ಲಾಂಚ್ ಮಾಡುವ ಸಾಧ್ಯತೆ ಇದೆ.