Wednesday, September 30, 2026

BDA Apartments

Home Front Page ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನಲ್ಲಿ ಸಾಕಷ್ಟು ಬದಲಾವಣೆ-ಮಾಜಿ ಸಿಎಂ ಬೊಮ್ಮಾಯಿ.

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನಲ್ಲಿ ಸಾಕಷ್ಟು ಬದಲಾವಣೆ-ಮಾಜಿ ಸಿಎಂ ಬೊಮ್ಮಾಯಿ.

ಕಲಬುರ್ಗಿ,ಮೇ,21,2024 (www.justkannada.in):  ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ, ಅಂತರಿಕ ಕಲಹ, ಅಸಮಾಧಾನದಿಂದಾಗಿ ಸರ್ಕಾರ ಬೀಳಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜೂನ್ 4 ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ನಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಸಿಎಂ ಸಿದ್ದರಾಮಯ್ಯ  ಹಾಗೂ ಡಿಸಿಎಂ ಡಿಕೆ ಶಿವಕುಮಾರ್  ನಡುವಿನ ಆಂತರಿಕ ಕಲಹ, ಸಚಿವರ ಅಸಮಾಧಾನದಿಂದಾಗಿ ಸರ್ಕಾರ ಉರುಳಲಿದೆ ಎಂದರು.ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನಲ್ಲಿ ಸಾಕಷ್ಟು ಬದಲಾವಣೆ-ಮಾಜಿ ಸಿಎಂ ಬೊಮ...

ಚುನಾವಣೆ ಸಮಯದಲ್ಲಿ ಡಿಕೆ ಶಿವಕುಮಾರ್ ನೀಡುತ್ತಿರುವ ಹೇಳಿಕೆ ಗಮನಿಸಿದರೇ ವೈಯಕ್ತಿಕ ಪ್ರತಿಷ್ಠೆಯ ಪೈಪೋಟಿ ಹೆಚ್ಚಾಗಿದೆ ಎಂದು ಗೊತ್ತಾಗುತ್ತದೆ. ಚುನಾವಣೆಗೆ ಸಚಿವರುಗಳು ತಾವು ಸ್ಪರ್ಧೆ ಮಾಡುವ ಬದಲು ಮಕ್ಕಳನ್ನ ಕಣಕ್ಕಿಳಿಸಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರಿಗೆ ರಾಜ್ಯದಲ್ಲಿ ರಾಜಕೀಯ ವಾತಾವರಣ ತಮಗೆ ಪ್ರತಿಕೂಲವಾಗಿದೆ ಎಂಬುದು ತಿಳಿದಿದೆ. ಹೀಗಾಗಿ ಹತಾಶೆಗೊಂಡಿದ್ದಾರೆ ಎಂದು ಬೊಮ್ಮಾಯಿ ಲೇವಡಿ ಮಾಡಿದರು.

Key words: lot of change, Congress, Former CM, Bommai