ಭತ್ತ ಕಟಾವು ಮಾಡುವ ಯಂತ್ರದ ಲಾರಿ- ಬೈಕ್ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು.

ಚಾಮರಾಜನಗರ,ಜನವರಿ,15,2024(www.justkannada.in): ಭತ್ತ ಕಟಾವು ಮಾಡುವ ಯಂತ್ರದ ಲಾರಿ ಮತ್ತು ಬೈಕ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ  ಜಿನಕನಹಳ್ಳಿ ಬಳಿ ನಡೆದಿದೆ.

ಪತಿ ಸಂತೋಷ್(32), ಪತ್ನಿ ಸೌಮ್ಯ(27) ಹೆಣ್ಣು ಮಗು ನಿತ್ಯಸಾಕ್ಷಿ (4) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುತ್ರ ಅಭಿ(9)ಗಾಯಗೊಂಡಿದ್ದು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಮೂವರು ಕೊಳ್ಳೇಗಾಲ ತಾಲ್ಲೂಕು ಪಾಳ್ಯ ಗ್ರಾಮದ ನಿವಾಸಿಗಳಾಗಿದ್ದಾರೆ. ಮೂವರು ಬೈಕ್ ನಲ್ಲಿ ತೆರಳುತ್ತಿದ್ದು ಈ ವೇಳೆ ಅಪಘಾತ ಸಂಭವಿಸಿದೆ.

ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.

Key words: lorry-bike-collision-Three died-on the spot.