ಬಿಜೆಪಿ ಶಾಸಕ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ: ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ- ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಮಾರ್ಚ್,3,2023(www.justkannada.in): ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಮನೆ ನಿವಾಸದ ಮೇಲೆ ಲೋಕಾಯುಕ್ತ ದಾಳಿ ವಿಚಾರ ಸಂಬಂಧ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಲೋಕಾಯುಕ್ತ ಬಲ ಪಡಿಸಿದ ಕಾರಣಕ್ಕೆ ಇಂತಹ ದಾಳಿ ನಡೆದಿದೆ. ನನಗೆ ಇನ್ನೂ ಹೆಚ್ಚಿನ ವಿವರಗಳು ಬಂದಿಲ್ಲ ಎಂದರು.

ಸಚಿವ ನಾರಾಯಣ ಗೌಡಗೆ ಕಾಂಗ್ರೆಸ್ ಅಫರ್ ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್,  ಅವರ ಹೇಳಿಕೆಯನ್ನ ನಾನು ಗಮನಿಸಿದ್ದೇನೆ. ನನಗೆ ಆಫರ್ ಬಂದಿಲ್ಲ ಅಂತ ಹೇಳಿದ್ದಾರೆ. ನನಗೂ ಅಂತಹ ಯಾವುದೇ ಆಫರ್ ಗಳು ಬಂದಿಲ್ಲ. ಬಿಜೆಪಿ ಸರ್ಕಾರದಲ್ಲಿ ಒಳ್ಳೆಯ ಕೆಲಸ‌ಮಾಡಿ ಎಂದು ಜವಾಬ್ದಾರಿ ಕೊಟ್ಟಿದ್ದಾರೆ. ಆ ಕೆಲಸ ಮಾಡುತ್ತಿದ್ದೇನೆ ಎಂದರು.

ಮೈಸೂರಿಗೆ ಒಂದು ತಿಂಗಳಿನಿಂದ ಬರದಿರುವುದಕ್ಕೆ ಚುನಾವಣೆ ಕಾರಣವಲ್ಲ. ಇಲಾಖೆಯ ಬೇರೆ ಬೇರೆ ಕಾರ್ಯಕ್ರಮಗಳ ಕಾರಣ ಬೇರೆ ಜಿಲ್ಲೆಗಳಿಗೆ ಓಡಾಡುತ್ತಿದ್ದೇನೆ. ಹೀಗಾಗಿ ಬಂದಿಲ್ಲ ಅಷ್ಟೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ ನನಗೆ ಬೆಂಗಳೂರು ಜವಾಬ್ದಾರಿ ಇದೆ. ಅಲ್ಲಿ ಆ ಕೆಲಸ ಮಾಡುತ್ತಿದ್ದೇನೆ ಎಂದು ಎಸ್ .ಟಿ ಸೋಮಶೇಖರ್ ತಿಳಿಸಿದರು.

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸಚಿವ ಸೋಮಣ್ಣ ಗೈರು ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ಅವರು 45 ವರ್ಷದ ರಾಜಕೀಯ ಅನುಭವ ಇರುವವರು.  ಅವರೇ ಈ ಬಗ್ಗೆ ಮಾತನಾಡುತ್ತಾರೆ ಎಂದರು.

Key words: Lokayukta-attack -BJP -MLA –son- no shame-party-Minister -ST Somashekhar.