Monday, September 14, 2026

BDA Apartments

ಶಾಸಕರು ಬಾಯಿ ಮುಚ್ಚಿಕೊಂಡು ಇದ್ರೆ ಒಳ್ಳೆಯದು- ಡಿಸಿಎಂ ಡಿಕೆ ಶಿವಕಕುಮಾರ್ ಬಹ...
Home Front Page ಶಾಸಕರು ಬಾಯಿ ಮುಚ್ಚಿಕೊಂಡು ಇದ್ರೆ ಒಳ್ಳೆಯದು- ಡಿಸಿಎಂ ಡಿಕೆ ಶಿವಕಕುಮಾರ್ ಬಹಿರಂಗ ಎಚ್ಚರಿಕೆ.

ಶಾಸಕರು ಬಾಯಿ ಮುಚ್ಚಿಕೊಂಡು ಇದ್ರೆ ಒಳ್ಳೆಯದು- ಡಿಸಿಎಂ ಡಿಕೆ ಶಿವಕಕುಮಾರ್ ಬಹಿರಂಗ ಎಚ್ಚರಿಕೆ.

ಬೆಂಗಳೂರು,ಜೂನ್,10,2024 (www.justkannada.in): ಲೋಕಸಭೆ ಚುನಾವಣೆಯಲ್ಲಿ ಕೆಲ ಸಚಿವ ಕ್ಷೇತ್ರದಲ್ಲಿ ಹಿನ್ನಡೆಯಾದ ಹಿನ್ನೆಲೆ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಆಗ್ರಹಿಸಿದ್ದು ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಶಾಸಕರು ಬಾಯಿ ಮುಚ್ಚಿಕೊಂಡು ಇದ್ರೆ ಒಳ್ಳೆಯದು ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್. ಲೋಕಸಭೆ ಚುನಾವಣೆಯಲ್ಲಿ ಸೋಲು ನಮಗೆ ಎಚ್ಚರಿಕೆ ಗಂಟೆ. ಇಂದು ಬೆಂಗಳೂರು ನಗರ ಕಾಂಗ್ರೆಸ್ ಶಾಸಕರ ಸಭೆ  ಕರೆದಿದ್ದೇವೆ. ಎಲ್ಲಿ ತಪ್ಪಾಗಿದೆ ಎಂದು ಪರಿಶೀಲಿಸಲಾಗುತ್ತದೆ.  ಸೋಲಿನ ಸಂಬಂಧ ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದೇವೆ ಎಂದರು.ಶಾಸಕರು ಬಾಯಿ ಮುಚ್ಚಿಕೊಂಡು ಇದ್ರೆ ಒಳ್ಳೆಯದು dks-dk-shivakumar dks dk shivakumar

ಲೋಕಸಭೆ ಚುನಾವಣೆಯಲ್ಲಿ 14 ರಿಂದ 15 ಸ್ಥಾನ ಬರುತ್ತೆ ಅಂದುಕೊಂಡಿದ್ದವು. ಆದರೆ ನಾವು ಫೇಲ್ ಆಗಿದ್ದೇವೆ ಇದನ್ನ ನಾವು ಒಪ್ಪಿಕೊಳ್ಳಬೇಕು. ನನ್ನ ಕ್ಷೇತ್ರದಲ್ಲೂ ಕೂಡ ಹಿನ್ನೆಡೆಯಾಗಿದೆ ಕೆಲ ಸಚಿವರ ಕ್ಷೇತ್ರದಲ್ಲೂ ಹಿನ್ನಡೆಯಾಗಿದೆ. ಯಾವುದೇ ಸಚಿವರು ಸೋಲಿನ ಬಗ್ಗೆ ದೂರು ನೀಡಿಲ್ಲ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: lokasabha, election, MLAs, DCM, DK Shivakumar