Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Election News and Analysis ಬಿಜೆಪಿ ಭರ್ಜರಿ ಮುನ್ನಡೆ: ನಿಜವಾಗುತ್ತಿದೆ ಚುನಾವಣಾ ಸಮೀಕ್ಷೆಗಳ ಭವಿಷ್ಯ

ಬಿಜೆಪಿ ಭರ್ಜರಿ ಮುನ್ನಡೆ: ನಿಜವಾಗುತ್ತಿದೆ ಚುನಾವಣಾ ಸಮೀಕ್ಷೆಗಳ ಭವಿಷ್ಯ

ಬೆಂಗಳೂರು, ಮೇ 23, 2019 (www.justkannada.in): ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ದೇಶದೆಲ್ಲೆಡೆ ಶಾಂತಿಯುತವಾಗಿ ಭರದಿಂದ ನಡೆಯುತ್ತಿದೆ.

ಸದ್ಯದ ಫಲಿತಾಂಶವನ್ನು ಅವಲೋಕಿಸಿದರೆ ಚುನಾವಣಾ ಪೂರ್ವ ಹಾಗೂ ಚುನಾವಣಾ ನಂತರದ ಸಮೀಕ್ಷೆಗಳು ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ದೇಶದೆಲ್ಲೆಡೆ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದು, ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಸದ್ಯದ ಮಾಹಿತಿ ಪ್ರಕಾಶ ಎನ್ ಡಿಎ 343 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಯುಪಿಎ ಕೇವಲ 90 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರೆ 110 ಕ್ಷೇತ್ರಗಳಲ್ಲಿ ಪಕ್ಷೇತರ, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.