ಕೊರೊನಾ ಚೈನ್ ಲಿಂಕ್ ಬ್ರೇಕ್  ಮಾಡಲು ಲಾಕ್ ಡೌನ್ ಮುಂದುವರಿಕೆ ಸೂಕ್ತ- ಮಾಜಿ ಸಚಿವ ರಮೇಶ್ ಜಾರಕಿಹೊಳಿ..

ಬೆಳಗಾವಿ,ಮೇ,15,2021(www.justkannada.in):  ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಚೈನ್ ಲಿಂಕ್ ಬ್ರೇಕ್ ಮಾಡಲು ಲಾಕ್ ಡೌನ್  ಮುಂದುವರೆಸುವುದು ಸೂಕ್ತ ಎಂದು  ಮಾಜಿ ಸಚಿವ ರಮೇಶ್ ಜಾರಕಿಹೊಳಿ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.jk

ಗೋಕಾಕ್ ನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಜಾರಕಿಹೊಳಿ, , ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಚೈನ್ ಲಿಂಕ್ ಬ್ರೇಕ್ ಮಾಡಲು ಲಾಕ್ ಡೌನ್ ಮುಂದುವರಿಕೆ ಮಾಡುವುದು ಸೂಕ್ತ. ಇದರಿಂದ ಲಾಕ್ ಡೌನ್ ನಿಯಂತ್ರಣ ಮಾಡಬಹುದು ಎಂದು ಹೇಳಿದ್ದಾರೆ.lockdown-corona-chain-link-break-former-minister-ramesh-jarakiholli

ವಿಪಕ್ಷದವರು ಮೊದಲು ಲಸಿಕೆ ವಿರೋಧಿಸಿದ್ದರು. ಈಗ ಅವರೇ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಕೊರೊನಾ ವಿಚಾರದಲ್ಲಿ ವಿಪಕ್ಷದವರು ರಾಜಕೀಯ ಮಾಡಬಾರದು ಶಾಸಕ ರಮೇಶ್ ಜಾರಕಿಹೊಳಿ  ಹೇಳಿದರು.

Key words: Lockdown – Corona -chain link- break- Former Minister -Ramesh jarakiholli.