ಸ್ಥಳೀಯರ ಬೇಡಿಕೆ ಬಂದ್ರೆ ಶೃಂಗೇರಿ ದೇವಸ್ಥಾನದ ಸಲಾಂ ಆರತಿಗೆ ಬ್ರೇಕ್ – ಸಚಿವ ಆರ್.ಅಶೋಕ್

ಬೆಂಗಳೂರು,ಅಕ್ಟೋಬರ್,8,2022(www.justkannada.in): ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ ಪ್ರೆಸ್ ರೈಲು ಎಂದು ಹೆಸರು ಬದಲಾವಣೆ ಮಾಡಿದ ಬೆನ್ನಲ್ಲೆ ಶೃಂಗೇರಿ ದೇವಸ್ಥಾನದಲ್ಲಿ ಟಿಪ್ಪು ಹೆಸರಿನಲ್ಲಿ ನಡೆಯುವ ಸಲಾಂ ಆರತಿಗೆ ಬ್ರೇಕ್ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವ ಆರ್.ಅಶೋಕ್, ಸ್ಥಳೀಯರ ಬೇಡಿಕೆ ಬಂದರೇ ಸಲಾಂ ಆರತಿಗೆ ಬ್ರೇಕ್  ಹಾಕಲಾಗುತ್ತದೆ. ದರ್ಮದರ್ಶಿಗಳು  ಮನವಿ ಸಲ್ಲಿಸಿದರೇ ಪರಿಶೀಲಿಸುತ್ತೇವೆ. ಈವರೆಗೂ ಯಾವ ಅರ್ಜಿ ಬಂದಿಲ್ಲ. ಬಂದರೆ ನಿಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.kpcc-president-dk-shivakumar-function-minister-r-ashok

ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರು ಬದಲಾವಣೆ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸಚಿವ ಆರ್.ಅಶೋಕ್,  ಟಿಪ್ಪು ಸುಲ್ತಾನ್ ಕನ್ನಡಿಗ ಅಲ್ಲ. ಮತಾಂಧ. ಟಿಪ್ಪು ಅವಧಿಯಲ್ಲಿ ಕನ್ನಡ ಇರಲಿಲ್ಲ. ಪರ್ಷಿಯನ್ ಬಾಷೆ ಬಳಸುತ್ತಿದ್ದರು.   ಜಿನ್ನಾ ಘಜ್ನಿ, ಲಾಡನ್ ಹೆಸರಿನಲ್ಲಿ ಸಿದ್ದರಾಮಯ್ಯ ರೈಲು ಓಡಿಸಲಿ.  ಆಗ ಜನ ಯಾರನ್ನ ಓಡಿಸುತ್ತಾರೆ ಗೊತ್ತಾಗುತ್ತದೆ. ರಾಜ್ಯಕ್ಕೆ ಮೈಸೂರು ಒಡೆಯರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಸದುದ್ದೇಶದಿಂದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರು ಹಾಕಲಾಗಿದೆ ಎಂದರು.

Key words: Locals-demand -break – Salam Aarti-minister-R.Ashok