ರಾಜ್ಯದ 8 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್: ಅಧಿಕೃತ ಘೋಷಣೆ ಬಾಕಿ..?

ಬೆಂಗಳೂರು,ಮಾರ್ಚ್,8,2024(www.justkannada.in): ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್ ಇದೀಗ ರಾಜ್ಯದ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಫೈನಲ್ ಮಾಡಿದ್ದು ಅಧಿಕೃತವಾಗಿ ಬಿಡುಗಡೆ ಮಾಡುವುದೊಂದೆ ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ಮೊದಲ ಈ ಪಟ್ಟಿಯಲ್ಲಿ ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್, ಮಂಡ್ಯದಿಂದ ಸ್ಟಾರ್ ಚಂದ್ರು  ಅವರ ಹೆಸರು ಅಂತಿಮವಾಗಿದೆ ಎನ್ನಲಾಗಿದೆ.

8 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೀಗಿದೆ.

ಶಿವಮೊಗ್ಗ-ಗೀತಾ ಶಿವರಾಜ್ ಕುಮಾರ್

ಉಡುಪಿ-ಚಿಕ್ಕಮಗಳೂರು –ಜಯಪ್ರಕಾಶ್ ಹೆಗಡೆ

ವಿಜಯಪುರ- ರಾಜು ಅಲಗೂರು

ಮಂಡ್ಯ- ಸ್ಟಾರ್ ಚಂದ್ರು

ತುಮಕೂರು -ಮುದ್ದಹನುಮೇಗೌಡ

ಚಿತ್ರದುರ್ಗ- ಬಿಎನ್ ಚಂದ್ರಪ್ಪ

ಬೆಂಗಳೂರು ಗ್ರಾಮಾಂತರ –ಡಿ.ಕೆ ಸುರೇಶ್

ಹಾಸನ ಶ್ರೇಯಸ್ -ಪಾಟೀಲ್

Key words: List – Congress candidates – 8 constituencies – state- final