ಸರ್ದಾರ್ ವಲ್ಲಭಾಯ್ ಪಟೇಲರಂತೆ ಅಮಿತ್ ಶಾ ಉಕ್ಕಿನ ಮನುಷ್ಯ- –ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ…

ಬೆಂಗಳೂರು,ಆ,5,2019(www.justkannada.in): ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದತಿಗೆ ಸಂಬಂಧಿಸಿದ ಮಸೂದೆಯನ್ನ ಇಂದು ರಾಜ್ಯಸಭೆಯಲ್ಲಿ ಮಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ರಾಜ್ಯ ವಿಧಾನಪರಿಷತ್ ವಿಪಕ್ಷನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಸರ್ದಾರ್ ವಲ್ಲಭಾಯಿ ಪಟೇಲರಿಗೆ ಹೋಲಿಸಿದ್ದಾರೆ.

ಆರ್ಟಿಕಲ್ 370ರ ರದ್ದತಿಯನ್ನ ಸ್ವಾಗತಿಸಿದ ಕೋಟಾಶ್ರೀನಿವಾಸ್ ಪೂಜಾರಿ, ಜಮ್ಮು ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ ನಿರ್ಧಾರ ಸ್ವಾಗತ. ಸರ್ದಾರ್ ವಲ್ಲಭಾಯ್ ಪಟೇಲರಂತೆ ಅಮಿತ್ ಶಾ ಉಕ್ಕಿನ ಮನುಷ್ಯ ಎಂದು ಗುಣಗಾನ ಮಾಡಿದರು.

ಹಾಗೆಯೇ ಕಾಶ್ಮೀರ ಬೇರ್ಪಟ್ಟುಹೋಗುತ್ತದೆ ಎಂಬ ಆತಂಕ ದೂರವಾಗಿದೆ.  ಪ್ರತಿಯೊಬ್ಬ ರಾಷ್ಟ್ರಭಕ್ತನೂ ಪಕ್ಷಾತೀತವಾಗಿ ಈ  ನಿರ್ಧಾರವನ್ನ ಸ್ವಾಗತಿಸಬೇಕು ಎಂದು ಕೋಟಾ ಶ್ರೀನಿವಾಸಪೂಜಾರಿ ತಿಳಿಸಿದ್ದಾರೆ.

Key words: Like -Sardar Vallabhbhai Patel- Amit Shah -steel man-Kota Srinivas Poojary.