ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರದ ನಡೆಗೆ ನಟ ಜಗ್ಗೇಶ್ ಮೆಚ್ಚುಗೆ

ಬೆಂಗಳೂರು:ಆ-5:(www.justkannada.in) ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ನೇ ವಿಧಿ ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಚಿತ್ರ ನಟ, ರಾಜಕಾರಣಿ ನವರಸನಾಯಕ ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕುರಿತು ಟ್ವೀಟರ್ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

”ಕರ್ಣಾನಂದವಾಯಿತು ಇಂದಿನ ನನ್ನ ಹೆಮ್ಮೆಯ ಭಾಜಪ ಪಕ್ಷದ ಐತಿಹಾಸಿಕ ನಿರ್ಣಯ..ಭಾರತೀಯರ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. 1947ಅಲ್ಲಾ 2019 ಭಾರತಕ್ಕೆ ನಿಜವಾದ ಸ್ವತಂತ್ರ ಸಿಕ್ಕ ದಿನ. ಒಕ್ಕೂರಲಿನ ಸ್ವಾಭಿಮಾನದ ಘೋಷ ಮೊಳಗಲಿ..” ಎಂದು ಪೋಸ್ಟ್ ಮಾಡಿದ್ದಾರೆ.

ಅದಕ್ಕೂ ಮೊದಲು ಇನ್ನೊಂದು ಟ್ವೀಟ್ ಮಾಡಿರುವ ಜಗ್ಗೇಶ್- ’”ಕಾಶ್ಮೀರ ಭಾರತಮಾತೆಯ ಮುಕುಟ! 70ವರ್ಷ ಕಳಚಿಟ್ಟು ಭಾರತಮಾತೆಗೆ ಜೈ ಅಂದರೆ ಕಳೆಕಟ್ಟದು! ಇಂದು ಭಾರತಮಾತೆ ಸ್ವಾಭಿಮಾನಿ ಮಕ್ಕಳು ಅವಳ ಮುಕುಟ ತಲೆಮೇಲೆ ಇಡಲು ಸನ್ನದ್ಧರಾಗಿದ್ದಾರೆ ಅವರ ಜೊತೆ ಕೈ ಜೊಡಿಸಿ ಎಲ್ಲರು ಜೈ ಅನ್ನುವ ಕಾಲಬಂದಿದೆ! ಈಗ ಯಾರು ಅವಳ ನಿಜಮಕ್ಕಳು ಜಗ ಅರಿವುದು ಜೈಹಿಂದ್..” ಎಂದು ಬರೆದಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರದ ನಡೆಗೆ ನಟ ಜಗ್ಗೇಶ್ ಮೆಚ್ಚುಗೆ

Jammu and kashmir,Article 370 cancelled,actor jaggesh,support