ನಟ ಪ್ರಕಾಶ್ ರಾಜ್ ಕುಟುಂಬಕ್ಕೆ ಜೀವ ಬೆದರಿಕೆ: ಬೆಂಗಳೂರಿನಲ್ಲಿ ದೂರು ದಾಖಲು

ಬೆಂಗಳೂರು, ಸೆಪ್ಟೆಂಬರ್ 20, 2023 (www.justkannada.in): ನಟ ಪ್ರಕಾಶ್ ರಾಜ್ ತಮ್ಮ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಬೆಂಗಳೂರಿನಲ್ಲಿ ದೂರು ನೀಡಿದ್ದಾರೆ.

ಯೂಟ್ಯೂಬ್​ ಚಾನೆಲ್’ವೊಂದರಲ್ಲಿ ಮಾಡಲಾಗಿರುವ ಎರಡು ವಿಡಿಯೋಗಳಲ್ಲಿ ಜೀವ ಬೆದರಿಕೆ ಹಾಕಲಾಗಿದ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದು, ದೂರಿನ ಹಿನ್ನೆಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಆಗಸ್ಟ್ 14 ರಂದು ಜೀವ ಬೆದರಿಕೆ ಹಾಕುವ ಸಂದೇಶಗಳ ರೀತಿ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಪ್ರಕಾಶ್ ರಾಜ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರನ್ನು ಆಧರಿಸಿ ಪೊಲೀಸ್ ಅಧಿಕಾರಿಗಳು ವಿಕ್ರಮ್ ಟಿವಿ ಮುಖ್ಯಸ್ಥರು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಲ್ಲಾ ಆರೋಪಿಗಳಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.