ನಿರ್ದೇಶಕ ಯೋಗರಾಜ್ ಭಟ್ಟರ ‘ಗರಡಿ’ಗೆ ಚಾಲೆಂಜಿಂಗ್ ಸ್ಟಾರ್ ಪ್ರವೇಶ !

ಬೆಂಗಳೂರು, ಸೆಪ್ಟೆಂಬರ್ 20, 2023 (www.justkannada.in): ನಿರ್ದೇಶಕ ಯೋಗರಾಜ್‌ ಭಟ್‌ ಅವರ ‘ಗರಡಿ’ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನವೆಂಬರ್‌ 10ಕ್ಕೆ ಚಿತ್ರ ರಿಲೀಸ್ ಆಗುತ್ತಿದ್ದು, ಇದಕ್ಕಾಗಿ ಚಿತ್ರತಂಡ ಇತ್ತೀಚೆಗಷ್ಟೇ ವಿಶೇಷ ಪೋಸ್ಟರ್‌ ಬಿಡುಗಡೆ ಮಾಡಿದೆ.

ಅಂದಹಾಗೆ ಪಾರಂಪರಿಕ ಕ್ರೀಡೆಗಳಲ್ಲಿ ಒಂದಾದ ಕುಸ್ತಿಯನ್ನು ಆಧರಿಸಿದ ಚಿತ್ರವಿದು. ಬಿ.ಸಿ.ಪಾಟೀಲ್‌ ತಮ್ಮ ಕೌರವ ಪ್ರೊಡಕ್ಷನ್‌ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರೂ ತೆರೆಯ ಮೇಲೆ ಕೆಲಕಾಲ ಕಾಣಿಸಿಕೊಳ್ಳುತ್ತಾರೆ. ಚಿತ್ರದ ನಾಯಕನ ಸ್ನೇಹಿತನಾಗಿ ದರ್ಶನ್ ಬರುತ್ತಾರೆ ಎನ್ನಲಾಗಿದೆ.

‘ಚಿಂಗಾರಿ’ ಚಿತ್ರಗಳಲ್ಲಿ ನಟಿಸಿದ್ದ ಯಶಸ್ ಸೂರ್ಯ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‌ ಖಳನಾಯಕ ರವಿಶಂಕರ್‌, ಬಿ.ಸಿ.ಪಾಟೀಲ್‌ ನಟಿಸಿದ್ದಾರೆ.