ಹೈಕೋರ್ಟ್ ಗೆ ಬಾಂಬ್ ಇಡುವುದಾಗಿ ವ್ಯಕ್ತಿಯಿಂದ ಬೆದರಿಕೆ ಪತ್ರ…

ಬೆಂಗಳೂರು,ಸೆ,21,2019(www.justkannada.in): ರಾಜ್ಯ ಹೈ ಕೋರ್ಟ್ ನಲ್ಲಿ ಬಾಂಬ್ ಇಡುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಪತ್ರ ಬರೆದಿದ್ದಾನೆ.

ದೆಹಲಿ ಮೂಲದ ಹರ್ದರ್ಶನ್ ಸಿಂಗ್ ಎಂಬಾತನ ಹೆಸರಿನಿಂದ ಪತ್ರ ಬಂದಿದೆ ಎನ್ನಲಾಗುತ್ತಿದೆ.  ಹರ್ದರ್ಶನ್ ಸಿಂಗ್ ಎಂಬಾತನಿಂದ ಹೈಕೋರ್ಟ್ ರಿಜಿಸ್ಟ್ರಾರ್ ಗೆ  ಬೆದರಿಕೆ ಪತ್ರ  ಬಂದಿದೆ. ಹರ್ದರ್ಶನ್ ಸಿಂಗ್  ಇಂಟರ್ ನ್ಯಾಷನಲ್ ಖಲಿಸ್ತಾನ ಸಪೋರ್ಟ್ ಗ್ರೂಪ್ ಗೆ ಸೇರಿದ ವ್ಯಕ್ತಿ ಎನ್ನಲಾಗಿದ್ದು, ತನ್ನ ಮಗನ ಜೊತೆಗೆ ಬಂದು ಹೈಕೋರ್ಟ್ ನ ವಿವಿಧೆಡೆ ಸೆಪ್ಟೆಂಬರ್ 30 ರಂದು  ಬಾಂಬ್ ಇಡುವುದಾಗಿ ಹೇಳಿದ್ದಾನೆ.

ಸದ್ಯ ಪತ್ರ ಆಧರಿಸಿ ವಿಧಾನಸೌಧದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕಿತ ಉಗ್ರರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.

Key words:  letter – person- threatening -bomb – High Court.