Tuesday, September 15, 2026

BDA Apartments

Home Front Page ಸಚಿವ ಚಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರಿಗೆ ಪತ್ರ ವಿಚಾರ: ಮೈಸೂರಿನಲ್ಲಿ ಮಾಹಿತಿ ಕಲೆ ಹಾಕಿದ ಸಿಐಡಿ ತಂಡ.

ಸಚಿವ ಚಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರಿಗೆ ಪತ್ರ ವಿಚಾರ: ಮೈಸೂರಿನಲ್ಲಿ ಮಾಹಿತಿ ಕಲೆ ಹಾಕಿದ ಸಿಐಡಿ ತಂಡ.

ಮೈಸೂರು,ಆಗಸ್ಟ್,9,2023(www.justkannada.in): ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆಯ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಮೈಸೂರಿಗೆ ಭೇಟಿ ನೀಡಿದ ಸಿಐಡಿ ತಂಡ ಮಾಹಿತಿ ಕಲೆಹಾಕಿ ದಾಖಲೆಗಳನ್ನ ಪಡೆದುಕೊಂಡಿದೆ.

ಸಚಿವ ಚಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರಿಗೆ ಪತ್ರ ವಿಚಾರ ಕುರಿತು ಸಿಐಡಿ ಐಜಿ ಪ್ರವೀಣ್ ಪವಾರ್ ಮಧುಕರ್ ನೇತೃತ್ವದ ಸಿಐಡಿ ತಂಡ ತನಿಖೆ ನಡೆಸುತ್ತಿದ್ದು, ಸಿಐಡಿ ತಂಡದ ಜೊತೆ ಮಂಡ್ಯ ಎಸ್ಪಿ ಯತೀಶ್ , ಮೈಸೂರಿನ ಸರಸ್ವತಿಪುರಂ ಪ್ರಧಾನ ಅಂಚೆ ಕಛೇರಿಗೆ ಆಗಮಿಸಿ ಭೇಟಿ ನೀಡಿ ಸತತ ಒಂದು ಗಂಟೆಗಳ ಕಾಲ ಮಾಹಿತಿ ಕಲೆ ಹಾಕಿದ್ದಾರೆ.

ಜುಲೈ 14 ರಂದು ಸರಸ್ವತಿಪುರಂ ಅಂಚೆ ಕಛೇರಿಯಿಂದ ರಾಜಭವನಕ್ಕೆ ಪತ್ರ ಹೋಗಿದ್ದು ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಿಐಡಿ ತಂಡದ ಅಧಿಕಾರಿಗಳು ದಾಖಲೆಗಳನ್ನ ತೆಗೆದುಕೊಂಡಿದ್ದು, ಮತ್ತಷ್ಟು ದಾಖಲೆಗಳನ್ನ ಒದಗಿಸುವಂತೆ ಅಂಚೆ ಕಛೇರಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

Key words: Letter – Governor -Minister –Chaluvarayaswamy- CID -team -information – Mysore.