Wednesday, July 29, 2026

BDA Apartments

Home Front Page ವಿಶ್ವಾಸ ಮತಯಾಚನೆಗೆ ದಿನಾಂಕ ನಿಗದಿ ಮಾಡುವಂತೆ ಸ್ಪೀಕರ್ ಗೆ ಬಿಜೆಪಿಯಿಂದ ಪತ್ರ….

ವಿಶ್ವಾಸ ಮತಯಾಚನೆಗೆ ದಿನಾಂಕ ನಿಗದಿ ಮಾಡುವಂತೆ ಸ್ಪೀಕರ್ ಗೆ ಬಿಜೆಪಿಯಿಂದ ಪತ್ರ….

ಬೆಂಗಳೂರು,ಜು,15,2019(www.justkannada.in):  ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಲು ದಿನಾಂಕ ನಿಗದಿ ಮಾಡುವಂತೆ ಸ್ಪೀಕರ್ ರಮೇಶ್ ಕುಮಾರ್ ಗೆ ಬಿಜೆಪಿ ಪತ್ರ ಬರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ನಡೆಯಲಿರುವ ವಿಧಾನಮಂಡಲ  ಮುಂಗಾರು ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಬಿಜೆಪಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆಗೆ ಪಟ್ಟು ಹಿಡಿಯಲಿದೆ. ಈ ಮಧ್ಯೆ ಬಿಜೆಪಿ ನಿಯೋಗ ಸ್ಪೀಕರ್ ರಮೇಶ್ ಕುಮಾರ್ ಅವರನ್ನ ಭೇಟಿಯಾಗಿ ಹಲವು ಪ್ರಶ್ನೆಗಳನ್ನಿಟ್ಟಿದ್ದಾರೆ ಎನ್ನಲಾಗಿದೆ.

ಸದನದಲ್ಲಿ ಇಂದಿನ ಪ್ರಶ್ನಾವಳಿ ಚರ್ಚೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ,  ಈಗಾಗಲೇ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಹೀಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಚಿವರೇ ಹೇಳುತ್ತಿದ್ದಾರ. ಹೀಗಿರುವಾಗ ಪ್ರಶ್ನಾವಳಿಗಳಲ್ಲಿ ಯಾರು ಉತ್ತರ ನೀಡುತ್ತಾರೆ.  ಸದನ ಹೇಗೆ ನಡೆಯುತ್ತದೆ ಎಂದು ಬಿಜೆಪಿ ನಿಯೋಗ ಸ್ಪೀಕರ್ ರಮೇಶ್ ಕುಮಾರ್ ಗೆ ಪ್ರಶ್ನಿಸಿದೆ. ಹಾಗೆಯೇ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆಗೆ ಬಿಜೆಪಿ ಪಟ್ಟು ಹಿಡಿದಿದೆ.

Key words: Letter – BJP – Speaker – set -date – confidence vote