Wednesday, July 29, 2026

BDA Apartments

Home Cinema ಎಲ್ಲರೂ ಒಟ್ಟಾಗಿ ನಿಂತು ಕಾವೇರಿ ಸಮಸ್ಯೆ ಬಗೆಹರಿಸೋಣ- ನಟ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ...

ಎಲ್ಲರೂ ಒಟ್ಟಾಗಿ ನಿಂತು ಕಾವೇರಿ ಸಮಸ್ಯೆ ಬಗೆಹರಿಸೋಣ- ನಟ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುಮಲತಾ ಅಂಬರೀಶ್ ಹೇಳಿಕೆ…

ಬೆಂಗಳೂರು, ಮೇ. 29,2019(www.justkannada.in):  ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹಿನ್ನೆಲೆ, ಎಲ್ಲರೂ ಒಟ್ಟಾಗಿ ನಿಂತು ಕಾವೇರಿ ನೀರು ಸಮಸ್ಯೆ ಬಗೆಹರಿಸೋಣ ಎಂದು ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಕರೆ ನೀಡಿದರು.

ಇಂದು ಮಾಜಿ ಸಚಿವ , ನಟ ಅಂಬರೀಶ್ ಅವರ ಹುಟ್ಟುಹಬ್ಬದ ಹಿನ್ನೆಲೆ   ಕಂಠೀರವ ಸ್ಟೂಡಿಯೋಗೆ ಭೇಟಿ ನೀಡಿದ ಸಂಸದೆ ಸುಮಲತಾ ಅಂಬರೀಶ್  ಅಂಬಿ ಅವರ ಸಮಾಧಿಗೆ ಮಾಲೆ ಸಮರ್ಪಣೆ ಮಾಡಿ ಪೂಜೆ ಸಲ್ಲಿಸಿದ್ದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸುಮಲತಾ ಅಂಬರೀಶ್,  ನಾನಿನ್ನು ಮಂಡ್ಯ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿಲ್ಲ.  ಜನಾಭಿಪ್ರಾಯ ತಿಳಿದು ನನ್ನ ಕೆಲಸ ಆರಂಭಿಸುತ್ತೇನೆ. ನನ್ನ ಜವಾಬ್ದಾರಿಯನ್ನ ಸಂಪೂರ್ಣವಾಗಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.

ಹಾಗೆಯೇ ಚುನಾವಣೆ ವೇಳೆ ನೀಡಿದ ಹೇಳಿಕೆಗಳಿಂದ ಪ್ರಯೋಜನವಿಲ್ಲ. ಜನಸಾಮಾನ್ಯರ ರೈತರ ಸಮಸ್ಯೆ ಅದರಿಂದ ಪರಿಹಾರವಾಗಲ್ಲ. ನನಗೆ ಜನ ಮುಖ್ಯ. ನನ್ನನ್ನ ಟೀಕಿಸುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ಹಾಗೆಯೇ ರೈತರ ಪರ ನಿಲ್ಲಲು ಯೋಜನೆಗಳ ಬಗ್ಗೆ ತಜ್ಞರ ಜತೆ ಚರ್ಚಿಸಿದ್ದೇನೆ. ಕಾವೇರಿ ನೀರು ಸಮಸ್ಯೆಯನ್ನ ಒಟ್ಟಾಗಿ ನಿಂತು ಬಗೆಹರಿಸಬೇಕು. ಒಬ್ಬರ ಕಾಲು ಇನ್ನೊಬ್ಬರು ಎಳೆಯಬಾರದು.ಕಾವೇರಿ ಸಮಸ್ಯೆ ಬಗ್ಗೆ ತಜ್ಞರ ಜತೆ ಚರ್ಚೆ ನಡೆಸಿದ್ದೇನೆ ಎಂದರು.

Key words: Let’s all stand together and solve the Cauvery water problem- sumlatha ambarish

#bangalore #sumalathaambarish #caverydispute