“ಶಾಸಕ ಸಾ.ರಾ.ಮಹೇಶ್ ಭದ್ರಕೋಟೆಗೆ ಜಿಟಿಡಿ ಲಗ್ಗೆ”

ಮೈಸೂರು,ಜನವರಿ,10,2021(www.justkannada.in) : ಕೆ.ಆರ್.ನಗರ ಕ್ಷೇತ್ರದ ಗ್ರಾಪಂ ನೂತನ ಸದಸ್ಯರಿಗೆ ಜಲದರ್ಶಿನಿ ಅತಿಥಿಗೃಹದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಭಿನಂದನೆ ಸಲ್ಲಿಸುವ ಮೂಲಕ ಸಾ.ರಾ.ಮಹೇಶ್ ಭದ್ರಕೋಟೆಗೆ ಜಿಟಿಡಿ ಲಗ್ಗೆಯಿಟ್ಟಿದ್ದಾರೆ.jk-logo-justkannada-mysore

ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ,ಮಹೇಶ್ ಒಳಬೇಗುದಿ ಹೊಸ ತಿರುವು ಪಡೆದುಕೊಂಡಿದೆ. ಸಾ.ರಾ.ಮಹೇಶ್ ಗೆ ರಾಜಕೀಯ ತಂತ್ರಗಾರಿಕೆ ಮೂಲಕ ಎದುರೇಟು ನೀಡಲು ಜಿಟಿಡಿ ಪ್ಲಾನ್? ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ.

ಜಿ.ಟಿ.ದೇವೇಗೌಡರಿಗೆ ಮುಡಾ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಸಾಥ್ ನೀಡಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದವರನ್ನು ನಾವು ಮರೆತು ಬಿಡ್ತೀವಾ. ನಾವು ಮೊದಲು ನಿಮ್ಮನ್ನೆ ನೋಡೊದು ಆನಂತರ ಪಾರ್ಟಿ. ಕೆ.ಆರ್.ನಗರ ನಿಮ್ಮ ಮನೆ ಯಾವ ಸಮಯದಲ್ಲಿ ಬಂದರೂ ನಿಮ್ಮ ಸೇವೆಗೆ ನಾವು ಸಿದ್ದ ಎಂದು ಕೆ.ಆರ್.ನಗರ ಜೆಡಿಎಸ್ ಕಾರ್ಯಕರ್ತರು ಜಿಟಿಡಿಗೆ ಬೆಂಬಲ ಸೂಚಿಸಿದ್ದಾರೆ.legislator-SA.RA.Mahesh-Bastion-GTD-Attack

 

 

ಸಾ.ರಾ ಮಹೇಶ್ ರನ್ನು  ಮೈಸೂರಿನ ಹೈ ಕಮಾಂಡ್ ಎಂದಿದ್ದ ಜಿ.ಟಿ.ಡಿ ಅವರು ಸಾ.ರಾ ಮಹೇಶ್ ಗೆ ಟಾಂಗ್ ನೀಡಲು. ಹೊಸ ರಾಜಕೀಯ ತಂತ್ರಗಾರಿಕೆಗೆ ಮುಂದಾಗಿದ್ದಾರೆ.  ಜಲದರ್ಶಿನಿ ಅತಿಥಿಗೃಹದಲ್ಲಿ ನೂರಾರು ಕೆ.ಆರ್.ನಗರ ಕ್ಷೇತದ ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದು ಕಂಡು ಬಂದಿದೆ.

key words : legislator-SA.RA.Mahesh-Bastion-GTD-Attack