Friday, September 18, 2026

BDA Apartments

ಶಾಸಕರನ್ನ ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲದಿದ್ದರೇ ಕೈಗೆ ಬಳೆ ತೊಟ್ಟುಕೊಳ...
Home Front Page ಶಾಸಕರನ್ನ ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲದಿದ್ದರೇ ಕೈಗೆ ಬಳೆ ತೊಟ್ಟುಕೊಳ್ಳಲಿ- ಸಿದ್ದರಾಮಯ್ಯ ವಿರುದ್ದ ಸಂಸದೆ ಶೋಭಾ ಕರಂದ್ಲಾಜೆ...

ಶಾಸಕರನ್ನ ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲದಿದ್ದರೇ ಕೈಗೆ ಬಳೆ ತೊಟ್ಟುಕೊಳ್ಳಲಿ- ಸಿದ್ದರಾಮಯ್ಯ ವಿರುದ್ದ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ…

ಹುಬ್ಬಳ್ಳಿ, ಮೇ 16,2019(www.justkannada.in):  ಸಿದ್ದರಾಮಯ್ಯ ಶಕ್ತಿ ಇದ್ದರೆ ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ. ಅವರ ಶಾಸಕರನ್ನು ಸಮಾಧಾನ ಪಡಿಸುವ ಕೆಲಸ ಸಿದ್ದರಾಮಯ್ಯನವರದು. ಆ ಕೆಲಸ ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಇಂದಯ ಮಾತನಾಡಿದ  ಶೋಭಾಕರಂದ್ಲಾಜೆ, ಸಿದ್ದರಾಮಯ್ಯ ನವರು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. . ಅವರು ಬಲಹೀನರು. ಅದಕ್ಕಾಗಿ ಅವರು ತಮ್ಮನ್ನು ತಾವು ದೇವರಾಜ ಅರಸು ಅವರಿಗೆ ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಅವರಿಗೆ ಹೋಲಿಸಿಕೊಳ್ಳುವ ನೈತಿಕತೆಯಿಲ್ಲ ಎಂದು  ಹರಿಹಾಯ್ದರು.

ಕೈ ಲಾಗದವರು ಮೈ ಪರಚಿಕೊಂಡರು ಎನ್ನುವ ಸ್ಥಿತಿಯಲ್ಲಿ ಸಿದ್ದರಾಮಯ್ಯ  ಇದ್ದಾರೆ. ಯಡಿಯೂರಪ್ಪ  ತಾವು  ಸಿಎಂ ಆಗ್ತೀನಿ ಅಂತಾ ಎಲ್ಲಿಯು ಹೇಳಿಲ್ಲ, ಅದನ್ನ ಹೇಳುತ್ತಿರುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಕ್ಕಾಗಿ ಅವರ ಶಾಸಕರನ್ನ  ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.

ಹಾಗೆಯೇ ಕುಂದಗೋಳಕ್ಕೆ ಕಮಿಷನ್ ಹಣವನ್ನ ಡಿಕೆಶಿ ಸಾಗಿಸುತ್ತಿದ್ದಾರೆ. ಹೀಗಾಗಿ ಅವರನ್ನ ಕುಂದಗೋಳ ಉಸ್ತುವಾರಿ ಮಾಡಿದ್ದಾರೆ ಎಂದು ಶೋಭಾಕರಂದ್ಲಾಜೆ ಆರೋಪಿಸಿದರು.

Key words: legislator – power -hold – wear – hands-Shobha Karandlaje- Siddaramaiah.