ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್…?

0
1

ಬೆಂಗಳೂರು,ಮೇ,24,2022(www.justkannada.in):  ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು ನಿನ್ನೆಯಷ್ಟೇ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ ಬಿಜೆಪಿ ಸಹ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನ ರಿಲೀಸ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪರಿಷತ್ ಚುನಾವಣೆಗೆ  ನಾಲ್ವರಿಗೆ ಟಿಕೆಟ್ ನೀಡಿದೆ ಎನ್ನಲಾಗಿದೆ. ಲಿಂಗರಾಜ ಪಾಟೀಲ್, ಚಲವಾದಿ ನಾರಾಯಣಸ್ವಾಮಿ ಕೇಶ‍ವ್ ಪ್ರಸಾದ್ , ಸಿ.ಮಂಜುಳ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಲಿಂಗಾಯತ ಸಮುದಾಯದಿಂದ ಲಿಂಗರಾಜ ಪಾಟೀಲ್ ಅವರಿಗೆ ದಲಿತ ಸಮುದಾಯದಿಂದ ಚಲವಾದಿ ನಾರಾಯಣಸ್ವಾಮಿ, ಹಿಂದುಳಿದ ವರ್ಗ ಸಮುದಾಯದಿಂದ ಕೇಶ‍ವ್ ಪ್ರಸಾದ್, ಮಹಿಳಾ ಕೋಟಾದಡಿ ಸಿ.ಮಂಜುಳ ಅವರನ್ನ ಅಭ್ಯರ್ಥಿಯನ್ನಾಗಿ ಮಾಡಿ ಬಿಜೆಪಿ ಹೆಸರು ಫೈನಲ್ ಮಾಡಿದೆ ಎಂದು ಹೇಳಲಾಗುತ್ತಿದೆ.

Key words: legislative Council-election-BJP -List -Release.