ಟೆನ್ನಿಸ್ ಬದುಕಿಗೆ ವಿದಾಯ ಘೋಷಿಸಲು ನಿರ್ಧರಿಸಿದ ಲಿಯಾಂಡರ್ ಪೇಸ್

ನವದೆಹಲಿ, ಡಿಸೆಂಬರ್ 26, 2019 (www.justkannada.in): ಭಾರತದ ಹಿರಿಯ ಟೆನಿಸ್‌ ಆಟಗಾರ ಲಿಯಾಂಡರ್ ಪೇಸ್ ಅವರು 2020ರಲ್ಲಿ ನಿವೃತ್ತರಾಗುವುದಾಗಿ ಬುಧವಾರ ಘೋಷಿಸಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದಾರೆ. ಎಲ್ಲರಿಗೂ ಕ್ರಿಸ್‌ಮಸ್‌ ಶುಭಾಶಯಗಳನ್ನು ತಿಳಿಸಿರುವ ಪೇಸ್‌, 2020 ನನ್ನ ಟೆನಿಸ್‌ ಬದುಕಿನ ವಿದಾಯದ ವರ್ಷವಾಗಲಿದೆ ಎಂದು ಘೋಷಿಸಲಿಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ.

‘ಈ ವರ್ಷ (2020) ನನ್ನ ಪಾಲಿಗೆ ಭಾವನಾತ್ಮಕವಾಗಿರಲಿದೆ. ನೀವೆಲ್ಲರೂ ನನ್ನೊಂದಿಗೆ ಘರ್ಜಿಸುವುದನ್ನು ಎದುರುನೋಡುತ್ತಿದ್ದೇನೆ’ ಎಂದೂ ಹೇಳಿಕೊಂಡಿದ್ದಾರೆ.