ಪಿಎಫ್ ಐ ಮತ್ತು ಎಸ್ ಡಿಪಿಐ ಜತೆ ಕಾಂಗ್ರೆಸ್ ಒಳ ಒಪ್ಪಂದ: ಕೇಂದ್ರ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಯತ್ನ- ಸಚಿವ ಸಿ.ಟಿ ರವಿ ಆರೋಪ…

ಮಂಗಳೂರು,ಡಿ,26,2019(www.justkannada.in):  ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಹೋರಾಟದ ನೆಪದಲ್ಲಿ ಕಾಂಗ್ರೆಸ್ ಗಲಭೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಆರೋಪಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸಿ.ಟಿ ರವಿ, ಗಲಭೆಯಲ್ಲಿ ಅಮಾಯಕರು ಸತ್ತರೆ ಪರಿಹಾರ ನೀಡುತ್ತೇವೆ. ಅಮಾಯಕರು ಆಗದಿದ್ದರೆ ಕ್ರಿಮಿನಲ್ ಚಟುವಟಿಕೆ ಭಾಗವಹಿಸಿದ್ದವರಿಗೆ ಪರಿಹಾರ ಕೊಡಬೇಕಾ? ದೊಣ್ಣೆ ಪೆಟ್ರೋಲ್ ಬಾಂಬ್ ಹಿಡಿದವರು ಅಮಾಯಕರಾ..? ಕಾಂಗ್ರೆಸ್  ದೃಷ್ಠಿಯಲ್ಲಿ ಯಾರು ಅಮಾಯಕರು ಅಂತಾ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಪಿಎಫ್ ಐ ಮತ್ತು ಎಸ್ ಡಿಪಿಐ ಜತೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅವರ ಮೇಲಿನ ಕೇಸ್ ಅನ್ನ ವಾಪಸ್ ಪಡೆದಿದ್ದಾರೆ. ಮೂವರು ಒಟ್ಟಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಪೊಲೀಸರು ಬಿಡುಗಡೆ ಮಾಡಿದ ದೃಶ್ಯಗಳ ಬಗ್ಗೆ  ಕಾಂಗ್ರೆಸ್ ನವರು  ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಗೆ ಚುನಾವಣೆ ಸೋತಾಗ ಇವಿಎಂ ಮೇಲೆ ಅನುಮಾನ; ಈಗ ಪೊಲೀಸರ ಮೇಲೆ ಅನುಮಾನ ಕಾಂಗ್ರೆಸ್ ಗೆ ಅನುಮಾನ ಪಡೋದು ಕೆಟ್ಟ ಚಾಳಿಯಾಗಿದೆ ಎಂದು  ಕಿಡಿಕಾರಿದರು.

Key words: Congress – agreement – PFI – SDPI-minister –CT ravi-outrage