Saturday, August 8, 2026

BDA Apartments

Home Front Page ಹೊಸ ರಾಜ್ಯಾಧ್ಯಕ್ಷರು ನೇಮಕವಾಗುವವರೆಗೆ ನೀವೇ ನಾಯಕತ್ವ ವಹಿಸಿಕೊಳ್ಳಿ- ಬಿಎಸ್ ವೈಗೆ ಬಿಜೆಪಿ ಶಾಸಕರ ಒತ್ತಾಯ..?

ಹೊಸ ರಾಜ್ಯಾಧ್ಯಕ್ಷರು ನೇಮಕವಾಗುವವರೆಗೆ ನೀವೇ ನಾಯಕತ್ವ ವಹಿಸಿಕೊಳ್ಳಿ- ಬಿಎಸ್ ವೈಗೆ ಬಿಜೆಪಿ ಶಾಸಕರ ಒತ್ತಾಯ..?

ಬೆಂಗಳೂರು,ಆಗಸ್ಟ್,19,2023(www.justkannada.in):  ರಾಜ್ಯ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕವಾಗುವ ತನಕ ನೀವೇ ನಾಯಕತ್ವ ವಹಿಸಿಕೊಳ್ಳಿ ಎಂದು ಬಿಎಸ್ ಯಡಿಯೂರಪ್ಪಗೆ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸುವ ಮೂಲಕ ಅಧಿಕಾರ ಕಳೆದುಕೊಂಡ ಬಿಜೆಪಿ ಇಲ್ಲಿವರೆಗೆ ವಿಪಕ್ಷ ನಾಯಕರನ್ನೂ ಆಯ್ಕೆ ಮಾಡಿಲ್ಲ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್ ಅವರ ಅವಧಿ ಮುಗಿದಿದೆ.  ಹೀಗಾಗಿ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಕಾಣುತ್ತಿದ್ದು ಈ ಹಿನ್ನೆಲೆಯಲ್ಲಿ ಹೊಸ ರಾಜ್ಯಾಧ್ಯಕ್ಷರು ನೇಮಕವಾಗುವವರೆಗೆ ನೀವೇ ನಾಯಕತ್ವ ವಹಿಸಿಕೊಳ್ಳಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬಿಜೆಪಿ ಶಾಸಕರು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ನಿನ್ನೆ ರಾತ್ರಿ  ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದಾರೆ. ‘ನಿಮಗೆ ಮಾತ್ರ ಕಾಂಗ್ರೆಸ್ ಪಕ್ಷ ಹೆದರುತ್ತದೆ. ಪಕ್ಷದ ನಾಯಕತ್ವದ ಕೊರತೆಯ ಲಾಭ ಪಡೆಯಲು ಕಾಂಗ್ರೆಸ್ ನೋಡುತ್ತಿದೆ. ಇದಕ್ಕೆ ನಾವು ಬ್ರೇಕ್ ಹಾಕಲೇಬೇಕಾಗಿದೆ   ಎಂದು ಬಿಜೆಪಿ ಶಾಸಕರು ತಿಳಿಸಿದ್ದಾರೆ ಎನ್ನಲಾಗಿದೆ.

Key words:  leadership-new -state -president – appointed- BJP MLAs- insist – BSY