Tuesday, August 11, 2026

BDA Apartments

Home Front Page ನಾಯಕತ್ವ ಬದಲಾವಣೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಅಭಿಪ್ರಾಯವೇನು ಗೊತ್ತೆ…?

ನಾಯಕತ್ವ ಬದಲಾವಣೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಅಭಿಪ್ರಾಯವೇನು ಗೊತ್ತೆ…?

ಮೈಸೂರು,ಮೇ,27,2021(www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಭಾರಿ ಸುದ್ದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಈ ಬಗ್ಗೆ ನನಗೇನು ಗೊತ್ತಿಲ್ಲ ಆ ಬಗ್ಗೆ ನಾನು ಮಾತನಾಡೋಲ್ಲ ಎಂದಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ನಮ್ಮ ಸರ್ಕಾರ ಬರೋಕೆ ನಮ್ಮ ಕಾರ್ಯಕರ್ತರು ಚಿತ್ರನ್ನ ಮೊಸರನ್ನ ತಿಂದು ಬಾವುಟ ಕಟ್ಟಿದ್ದಾರೆ. ತಮ್ಮ ಮನೆಯಿಂದ ದುಡ್ಡು ಹಾಕಿ ಪ್ರಚಾರ ಮಾಡಿದ್ದಾರೆ. ಅವರ ಶ್ರಮದಿಂದ 106 ಜನ ಬಿಜಪಿ‌ ಶಾಸಕರು ಆಯ್ಕೆಯಾದರು. ಅವರು ಗೆದ್ದಿದ್ದಕ್ಕೇನೆ ಉಳಿದವರು ಬಂದು ಸೇರಿಕೊಂಡಿದ್ದು. 106 ಜನರೇ ಇಲ್ಲದಿದ್ದಿದ್ರೆ ಸರ್ಕಾರ ಎಲ್ಲಾಗುತಿತ್ತು ಎಂದು ಪ್ರಶ್ನಿಸಿದರು.

ನಾವು ಕೆಲಸ ಮಾಡ್ತಿದ್ದೇವೆ‌, ಹೊರಗಿನಿಂದ ಬಂದವರು ಕೆಲಸ ಮಾಡ್ತಿದ್ದಾರೆ. ಎಲ್ಲವನ್ನು‌ ನಿಭಾಯಿಸುತ್ತಿರುವ ಬಿಎಸ್‌ವೈ ಒಬ್ಬ ಸಮರ್ಥ ಲೀಡರ್ ಆಗಿದ್ದಾರೆ. ಕೋವಿಡ್ ಸಂದರ್ಭದಲ್ಲು ಇಷ್ಟು ಶ್ರಮದಿಂದ ಕೆಲಸ ಮಾಡೋ ನಾಯಕನನ್ನ ನಾನು ನೋಡೆ ಇಲ್ಲ. ಈ ಮಧ್ಯೆ ನಾಯಕತ್ವ ಬದಲಾವಣೆ ಬಗ್ಗೆ ನನಗೇನು ಗೊತ್ತಿಲ್ಲ ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

Key words: leadership –change-mysore- MP- Pratap Simha-reaction