ಲಾಗೈಡ್ 2021 ರ ಡೈರಿ ಬಿಡುಗಡೆ ಹಾಗೂ ವಕೀಲರಿಗೆ ಡೈರಿ ವಿತರಣೆ ನಾಳೆ…..

ಮೈಸೂರು,ಡಿಸೆಂಬರ್,25,2020(www.justkannada.in): ನಾಳೆ ಮೈಸೂರು ವಕೀಲರ ಸಂಘ ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ 2021ರ ಡೈರಿ ಬಿಡುಗಡೆ ಕಾರ್ಯಕ್ರಮವನ್ನು ಮೈಸೂರಿನ ನ್ಯಾಯಾಲಯದ ಆವರಣದಲ್ಲಿರುವ ಮೈಸೂರು ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.Law Guide-Dairy -Release -Dairy Delivery - Lawyers –Tomorrow-mysore

ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. ಹೈಕೋರ್ಟ್‌ ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ 2021ರ ಡೈರಿ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಆನಂದ್ ಕುಮಾರ್ ಎಸ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮೈಸೂರು ಪ್ರಧಾನ  ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ರಾಮಚಂದ್ರ ಹುದ್ದಾರ್ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಶಿವಣ್ಣ ಬಿ ಉಪಾಧ್ಯಕ್ಷರಾದ ಶಿವಣ್ಣೇ ಗೌಡ ಎಸ್ ಜಿ ಸೇರಿ ಮೈಸೂರು ನ್ಯಾಯಾಲಯದ ಹಿರಿಯ ಕಿರಿಯ ನ್ಯಾಯಾಧೀಶರು, ಹಿರಿಯ ವಕೀಲರು ಕಿರಿಯ ವಕೀಲರು, ನ್ಯಾಯಾಲಯದ ಸಿಬ್ಬಂದಿ ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಬಳಗದ ಸದಸ್ಯರು ಭಾಗವಹಿಸಲಿದ್ದಾರೆ.

ಲಾಗೈಡ್ ವತಿಯಿಂದ 2 ಸಾವಿರ ಡೈರಿ ಹಂಚಿಕೆ

ಕೊರೊನಾ ಮಹಾಮಾರಿ ಜಗತ್ತನ್ನು ಬಿಟ್ಟು ಬಿಡದೆ ಕಾಡುತ್ತಿದೆ.‌ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇನ್ನೇನು ಕೊರೊನಾ ಭೀತಿ ಕಡಿಮೆಯಾಯಿತು ಅನ್ನೋ ಅಷ್ಟರಲ್ಲಿ ಇದೀಗ ಮತ್ತೆ ರೂಪಾಂತರಗೊಂಡ ಕೊರೊನಾ 2.O ಆತಂಕ ಹೆಚ್ಚಾಗಿದೆ ಇದು ಮೈಸೂರು ನಾಗರಿಕರ ನಿದ್ದೆಗೆಡಿಸಿದೆ ಮತ್ತು ಕಾರಣದಿಂದಾಗಿ ಎಲ್ಲಾ ಕ್ಷೇತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಪೊಲೀಸರು ಪತ್ರಕರ್ತರು ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರ ಸಂಕಷ್ಟ ಹೇಳತೀರದಾಗಿದೆ. ಇದಕ್ಕೆ ವಕೀಲರು ಸಹಾ ಹೊರತಾಗಿಲ್ಲ. ನ್ಯಾಯಾಲಯದ ಕಲಾಪಗಳು ಸರಿಯಾಗಿ ನಡೆಯದೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ತಮ್ಮ ವೃತ್ತಿ ಬಾಂಧವರಿಗೆ ಸಹಾಯ ಮಾಡಲು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗ ಮುಂದಾಗಿದೆ. ಪತ್ರಿಕೆಯ ಸಂಪಾದಕರಾದ ಹೆಚ್ ಎನ್ ವೆಂಕಟೇಶ್ ನೇತೃತ್ವದಲ್ಲಿ ಮೈಸೂರಿನ ವಕೀಲರಿಗೆ 2 ಸಾವಿರ ಡೈರಿಗಳನ್ನು ನೀಡಲಾಗುತ್ತಿದೆ. ವಕೀಲಿಕೆ ವೃತ್ತಿಗೆ ಡೈರಿ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಸಾಧನ. ಪ್ರಕರಣದ ಸಂಪೂರ್ಣ ಮಾಹಿತಿಯನ್ನು ನಮೂದಿಸಿಕೊಳ್ಳಲು ಡೈರಿ ಬೇಕೆ ಬೇಕು. ಹೀಗಾಗಿ ವಕೀಲರ ಸಹದ್ಯೋಗಿಗಳಿಗೆ ಅವಶ್ಯಕವಿರುವ ಡೈರಿಯನ್ನೇ ಲಾಗೈಡ್ ಕಾನೂನು‌ ಮಾಸ ಪತ್ರೆಕೆ ಬಳಗ ಮಾಡುತ್ತಿದೆ.

ಲಾಗೈಡ್ ಬಳಗದ ಸಮಾಜಪರ ಕಾಳಜಿ

ಲಾಗೈಡ್ ಕಾನೂನು ಮಾಸಪತ್ರಿಕೆ ಬಳಗ ಹಿಂದಿನಿಂದಲೂ ಸಹಾ ಹಲವು ಸಮಾಜಮುಖಿ ಕೆಲಸಗಳನ್ನು‌ ಮಾಡಿಕೊಂಡು ಬಂದಿದೆ. ಪತ್ರಿಕೆಯ ಮೂಲಕ ಸಮಾಜಕ್ಕೆ ಸಮಾಜದ ಜನರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಕಾನೂನಿನ ಬಗ್ಗೆ ತಿಳುವಳಿಕೆ ಅರಿವು ಮೂಡಿಸುವ ಕೆಲಸ ಮಾಡಿಕೊಂಡು ಬಂದಿದೆ.‌ಅಷ್ಟೇ ಅಲ್ಲ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವೃತ್ತಿಪರ ವಕೀಲರು ಸಂಕಷ್ಟಕ್ಕೆ ಸಿಲುಕಿದಾಗ ಪತ್ರಿಕೆಯ ಸಂಪಾದಕ ಹೆಚ್ ಎನ್ ವೆಂಕಟೇಶ್ ನೇತೃತ್ವದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಲಕ್ಷ ರೂಪಾಯಿ‌ ನಗದನ್ನು ಸಂಗ್ರಹಿಸಿ ಅಗತ್ಯವಿರುವ ವಕೀಲರಿಗೆ ನೀಡುವ ಕೆಲಸ ಮಾಡಿದೆ. ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಬಳಗದ ಈ‌ ಕಾರ್ಯವನ್ನು ಬೆಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ  ನಿವೃತ್ತ ನ್ಯಾಯಾಧೀಶರಾದ ಶ್ರೀ ಸಿ ಜಿ ಹುನಗುಂದ ಸೇರಿ ಹಲವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.Law Guide-Dairy -Release -Dairy Delivery - Lawyers –Tomorrow-mysore

ಹೆಚ್ ಎನ್ ವೆಂಕಟೇಶ್ ನೇತೃತ್ವದಲ್ಲಿ ತಜ್ಞರ ಬಳಗ

ಇನ್ನು ಕನ್ನಡದ ಏಕೈಕ ಕನ್ನಡ ಕಾನೂನು ಮಾಸಪತ್ರಿಕೆಯಾಗಿರುವ ಲಾಗೈಡ್‌ ಗೆ ಈಗ 21 ವಾರ್ಷಿಕೋತ್ಸವದ ಸಂಭ್ರಮ. 2000ನೇ ಇಸವಿಯಲ್ಲಿ ವಕೀಲರಾದ ಹೆಚ್ ಎನ್ ವೆಂಕಟೇಶ್ ನೇತೃತ್ವದಲ್ಲಿ ಆರಂಭವಾದ ಪತ್ರಿಕೆ ತಜ್ಞರ ಬಳಗವನ್ನು ಹೊಂದಿದೆ. ಮಾಜಿ ಸಚಿವರಾದ ಎ ಮಂಜು ಪತ್ರಿಕೆಯ ಗೌರವ ಸಂಪಾದಕರಾಗಿದ್ದಾರೆ. ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ ಕೆ ಸುರೇಶ್, ಶಾರದ ವಿಲಾಸ್ ಕಾಲೇಜಿನ ಉಪನ್ಯಾಸಕರು ಹಾಗೂ ಹಿರಿಯ ವಕೀಲರಾದ ಎಸ್ ಲೋಕೇಶ್, ಹಿರಿಯ ವಕೀಲರಾದ ಎಂ.ಡಿ ಹರೀಶ್ ಕುಮಾರ್ ಹೆಗ್ಡೆ, ಮೈಸೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಜಿ ವಿ ರಾಮಮೂರ್ತಿ, ವಕೀಲರಾದ ಗಿರಿಜೇಶ್ ಸೇರಿದಂತೆ ಹಲವು ಸ್ನೇಹಿತರು ಪತ್ರಿಕೆ ಜೊತೆ ಕೈ ಜೋಡಿಸಿದ್ದಾರೆ. ಈ ಮೂಲಕ ಒಂದು ಸಮರ್ಥ ತಂಡವಾಗಿ ಲಾಗೈಡ್ ಮೂಲಕ ಕಾನೂನಿನ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.

Key words: Law Guide-Dairy -Release -Dairy Delivery – Lawyers –Tomorrow-mysore