Monday, October 12, 2026

Dasara Wishes

Happy Dasara
Home Front Page ನಾಳೆ ಶಕ್ತಿ ಯೋಜನೆಗೆ ಚಾಲನೆ: ಎಲ್ಲಾ ಮಹಿಳೆಯರಿಗೂ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್- ಸಾರಿಗೆ ಸಚಿವ...

ನಾಳೆ ಶಕ್ತಿ ಯೋಜನೆಗೆ ಚಾಲನೆ: ಎಲ್ಲಾ ಮಹಿಳೆಯರಿಗೂ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್- ಸಾರಿಗೆ ಸಚಿವ ರಾಮಲಿಂಗರೆಡ್ಡಿ.  

ಬೆಂಗಳೂರು,ಜೂನ್,10,2023(www.justkannada.in):   ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ನಾಳೆ  ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ನಾಳೆ ಸಿಎಂ ‘ಶಕ್ತಿ ಯೋಜನೆ ಉದ್ಘಾಟನೆ ಮಾಡುತ್ತಾರೆ. ಬಳಿಕ  ಒಂದು ರೌಂಡ್ ಬಸ್ ನಲ್ಲಿ ಹೋಗುತ್ತೇವೆ. ಬೇರೆ ಪ್ರದೇಶಗಳಿಗೆ ಹೋಗುವ ಮಹಿಳೆಯರು ಬಸ್​ ನಲ್ಲಿ ಕುಳಿತಿರುತ್ತಾರೆ. ಆ ಬಸ್ ​ಗೆ ಸಿಎಂ ಹಸಿರು ನಿಶಾನೆ ತೋರಿಸಿ ಚಾಲನೆ ಕೊಡುತ್ತಾರೆ. ನಂತರ ಸ್ಮಾರ್ಟ್ ಕಾರ್ಡ್ ಸಾಂಕೇತಿಕವಾಗಿ ಕೆಲವರಿಗೆ ಕೊಡುತ್ತೇವೆ ಎಂದರು.

ಇನ್ನು  ಎಲ್ಲರೂ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು ಮೂರು ತಿಂಗಳು ಅವಧಿ ನೀಡಲಾಗಿದ್ದು, ಯಾವ ಬಸ್ ನಲ್ಲಿ ಅವಕಾಶ ಅಂತಾ ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ದೇವೆ  ಎಂದು ರಾಮಲಿಂಗರೆಡ್ಡಿ ತಿಳಿಸಿದರು.ನಾಳೆ ಶಕ್ತಿ ಯೋಜನೆಗೆ ಚಾಲನೆ: ಎಲ್ಲಾ ಮಹಿಳೆಯರಿಗೂ ಮೂರು ತಿಂಗಳಲ್ಲಿ ಸ್ಮಾರ್ಟ...

ಕೆಲವು ಭಾಗಗಳಲ್ಲಿ ಬಸ್ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಇನ್ನು  ಎಲ್ಲಿ ಸ್ಟಾಪ್ ಇದೆಯೇ ಅಲ್ಲಿ ಬಸ್ ನಿಲ್ಲಿಸಬೇಕು ಎಂದು ರಾಮಲಿಂಗರೆಡ್ಡಿ ಹೇಳಿದರು.

Key words: Launch -Shakti Yojana –tomorrow- Transport Minister- Ramalingareddy.