ಲಂಕಾ ಕ್ರಿಕೆಟಿಗರಾದ ಕುಶಾಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ಧನುಷ್ಕಾ ಗುಣತಿಲಕಗೆ ನಿಷೇಧದ ಬರೆ

ಬೆಂಗಳೂರು, ಜುಲೈ 31, 2021 (www.justkannada.in): ಇಂಗ್ಲೆಂಡ್ ಪ್ರವಾಸದಲ್ಲಿ ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆಗಾಗಿ ಹಿರಿಯ ಆಟಗಾರರಾದ ಕುಶಾಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ಧನುಷ್ಕಾ ಗುಣತಿಲಕ ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಂದು ವರ್ಷ ನಿಷೇಧ ವಿಧಿಸಿದೆ.

ಸರಣಿ ವೇಳೆಯಲ್ಲಿ ನಿಗದಿತ ಹೋಟೆಲ್ ನಿಂದ ಹೊರಹೋಗುವ ಮೂಲಕ ಬಯೋ ಬಬಲ್ ನಿಯಮ ಉಲ್ಲಂಘನೆ ಮಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಡಿಕ್ವೇಲಾ ಅವರನ್ನು 18 ತಿಂಗಳ ಅಮಾನತ್ತಿನೊಂದಿಗೆ ಮೆಂಡಿಸ್ ಮತ್ತು ಗುಣತಿಲಕ ಅವರನ್ನು ಎರಡು ವರ್ಷ ನಿಷೇಧಿಸುವಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಶಿಸ್ತುಪಾಲನಾ ಸಮಿತಿ ಶಿಫಾರಸು ಮಾಡಿತ್ತು.

ಆಟಗಾರರಿಂದ ಮತ್ತೊಂದು ಉಲ್ಲಂಘನೆಯಿದ್ದರೆ ಒಂದು ವರ್ಷದ ಅಮಾನತು ಶಿಕ್ಷೆಯನ್ನು ಎರಡು ವರ್ಷಗಳವರೆಗೆ ಮಾನ್ಯವಾಗಿರುತ್ತದೆ.