ಕೂಲ್ ಕ್ಯಾಪ್ಟನ್ ಹೊಸ ಹೇರ್ ಸ್ಟೈಲ್’ಗೆ ಫ್ಯಾನ್ಸ್ ಫಿದಾ !

ಬೆಂಗಳೂರು, ಜುಲೈ 31, 2021 (www.justkannada.in): ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

ಸೆಲೆಬ್ರೆಟಿಗಳ ನೆಚ್ಚಿನ ಹೇರ್ ಸ್ಟೈಲಿಸ್ಟ್ ಆಲಿಮ್​ ಹಕೀಮ್ ಧೋನಿಗೆ ಹೊಸ ಲುಕ್​ ಕೊಟ್ಟಿದ್ದಾರೆ. ಅಲ್ಲದೇ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಮಾಜಿ ಕ್ಯಾಪ್ಟನ್​ ಸೈಲಿಷ್​​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಧೋನಿ ಹೊಸ ಲುಕ್ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಕಮೆಂಟ್​ಗಳ ಸುರಿಮಳೆ ಬಂದಿದೆ. ಹೊಸ ಲುಕ್​ನಲ್ಲಿ ಧೋನಿ ಸಖತ್​ ಸ್ಟೈಲಿಶ್​​​ ಆಗಿ ಕಾಣಿಸಿಕೊಂಡಿದ್ದಾರೆ.