Friday, October 9, 2026

BDA Apartments

Home Front Page ವಯನಾಡಿನಲ್ಲಿ ಭೂಕುಸಿತ ದುರಂತ: ಮತ್ತೊಂದು ಶವ ಪತ್ತೆ: ಅವಶೇಷಗಳಡಿ ಹುದುಗಿದವರು ಇನ್ನೂ ನಾಪತ್ತೆ

ವಯನಾಡಿನಲ್ಲಿ ಭೂಕುಸಿತ ದುರಂತ: ಮತ್ತೊಂದು ಶವ ಪತ್ತೆ: ಅವಶೇಷಗಳಡಿ ಹುದುಗಿದವರು ಇನ್ನೂ ನಾಪತ್ತೆ

ವೈನಾಡು,ಜುಲೈ,9,2026 (www.justkannada.in): ಕೇರಳದ ವಯನಾಡಿನ ಕಲ್ಲಾಡಿಯಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಇದೀಗ ಮತ್ತೊಂದು ಶವ ಪತ್ತೆಯಾಗಿದ್ದು ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಜೆಸಿಬಿ ಯಂತ್ರದಲ್ಲಿ ಮಣ್ಣು ಸರಿಸುವಾಗ ಶವ ಪತ್ತೆಯಾಗಿದ್ದು ಮಣ್ಣು ಕುಸಿದ ಸ್ಥಳದಲ್ಲಿ ಸಿಬ್ಬಂದಿ ಶೋಧ ನಡೆಸುತ್ತಿದ್ದು, ಭೂಕುಸಿತದಲ್ಲಿ ನಾಪತ್ತೆಯಾದ ಐವರ ಪೈಕಿ ಮತ್ತೊಬ್ಬ ಶವವಾಗಿ ಪತ್ತೆಯಾಗಿದ್ದಾರೆ. ಇನ್ನುಳಿದ ನಾಲ್ವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ

ಅವಶೇಷಗಳ ಅಡಿಯಲ್ಲಿ ಹುದುಗಿಹೋದವರು ಇನ್ನೂ ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವವರು ಬದುಕಿರುವುದು ಅನುಮಾನ ಎನ್ನಲಾಗಿದೆ. ಮೀನಾಕ್ಷಿ ವಿಲಾಸ್ ನದಿಯಲ್ಲಿ ಇಂದು ಎನ್​ಡಿಆರ್​ಎಫ್ ಸಿಬ್ಬಂದಿಯಿಂದ ಶೋಧಕಾರ್ಯ ನಡೆಯಲಿದ್ದು ಇಂದು ಮಳೆಯ ಆರ್ಭಟ ನಿನ್ನೆಗಿಂತ ಕೊಂಚ ತಗ್ಗಿದೆ.ವಯನಾಡಿನಲ್ಲಿ ಭೂಕುಸಿತ ದುರಂತ: ಮತ್ತೊಂದು ಶವ ಪತ್ತೆ: ಅವಶೇಷಗಳಡಿ ಹುದುಗಿದವರ...

ನಾಪತ್ತೆಯಾದವರ ಪತ್ತೆಗಾಗಿ ನಿರಂತರವಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ. ಈ ಕುರಿತು ಮಾತನಾಡಿರುವ ಕೇರಳಂ ಮುಖ್ಯಮಂತ್ರಿ ಸತೀಶನ್, ವಯನಾಡು ಜಿಲ್ಲೆಯನ್ನ ಭೂಕುಸಿತ ಪ್ರದೇಶ ಎಂದು ಬಿಂಬಿಸಬೇಡಿ. ಒಂದು ಕಡೆ ಮಾತ್ರ ಭೂಕುಸಿತವಾಗಿದೆ. ನಾಪತ್ತೆಯಾಗಿರುವವರಿಗಾಗಿ ಶೋಧಕಾರ್ಯ ನಡೆಸಲಾಗುವುದು ಎಂದಿದ್ದಾರೆ.ವಯನಾಡಿನಲ್ಲಿ ಭೂಕುಸಿತ ದುರಂತ jk02_new jk02 new

Key words: Landslide, Wayanad, Another, body, found