ಮೈಸೂರು,ಜನವರಿ,9,2026 (www.justkannada.in): ಅಯೋಧ್ಯಯಲ್ಲಿ ಶ್ರೀ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯಾಗಿ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜನವರಿ 22ರಂದು ಸಂಜೆ 6:30ಕ್ಕೆ ಮೈಸೂರಿನ ಮುಖ್ಯದ್ವಾರದ ಅಶೋಕ ರಸ್ತೆಯ ವೀರ ಗಣಪತಿ ದೇವಸ್ಥಾನ ವೀರನಗಿರಿಯಲ್ಲಿ3ನೇ ವರ್ಷದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಈ ಕುರಿತ ಪ್ರಚಾರ ಸಾಮಗ್ರಿಯನ್ನು ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ಧಾಮದಲ್ಲಿಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳ ಅವರು ಬಿಡುಗಡೆಗೊಳಿಸಿ ಮಾತನಾಡಿದರು. ಇದೊಂದು ಅತ್ಯಂತ ಸಂತೋಷದ ವಿಷಯ, ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಗೊಂಡು ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ರಾಮ ಮಂದಿರ ನಿರ್ಮಾಣವು ಭಾರತೀಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಕೆಲಸವಾಗಿತ್ತು. ಅಯೋಧ್ಯೆ ಬಾಲ ರಾಮನ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಆಶೀರ್ವಾದಿಸಿದರು
ಈ ಸಂದರ್ಭದಲ್ಲಿ ವಿದ್ವಾನ್ ಪ್ರಹ್ಲಾದ್ ರಾವ್, ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿ ಶಾಸ್ತ್ರಿ, ಮಂಜುನಾಥ್, ಎಸ್ ಎನ್ ರಾಜೇಶ್, ಶ್ರೀನಿವಾಸ್, ನಕ್ಷತ್ರ ವಿಜಯ್, ಪುನೀತ್ ಕೂಡ್ಲೂರು, ಗಣೇಶ್, ಅಮಿತ್, ಕೃಷ್ಣ ದಾಸ್ ಪುರಾಣಿಕ್, ಶ್ಲೋಕ ಪಠಣೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಬಾಲಕ ಪೃಥು ಪಿ ಅದ್ವೈತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Key words: Ayodhya, Rama mandira , 2 years, Laksha deepostava, Mysore







