ಕಾಡಾನೆ ದಾಳಿಗೆ ಕಾರ್ಮಿಕ ಬಲಿ: ಅರಣ್ಯ ಇಲಾಖೆ ಮುತ್ತಿಗೆಗೆ ಯತ್ನ: ಪೊಲೀಸರಿಂದ ಲಾಠಿಚಾರ್ಜ್.

ಚಿಕ್ಕಮಗಳೂರು,ಸೆಪ್ಟಂಬರ್,9,2022(www.justkannada.in):  ಕಾಡಾನೆ ದಾಳಿಗೆ ಕಾರ್ಮಿಕ ಬಲಿಯಾದ ಹಿನ್ನೆಲೆ ಆಕ್ರೋಶಗೊಂಡ ಸ್ಥಳೀಯರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಚಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.

ಇಂದು ಕಾಡಾನೆ ದಾಳಿಗೆ ಕಾರ್ಮಿಕ ಬಲಿಯಾಗಿದ್ದು, ಅರಣ್ಯ ಇಲಾಖೆ ಕಚೇರಿ ಮುಂಭಾಗ ಕಾರ್ಮಿಕನ ಮೃತ ದೇಹವನ್ನಿಟ್ಟು ನೂರಾರು ಜನರು ಪ್ರತಿಭಟನೆ ನಡೆಸಿ ಕಾಡಾನೆ ಸೆರೆ ಹಿಡಿಯಲು ಆದೇಶ ಹೊರಡಿಸುವಂತೆ ಆಗ್ರಹಿಸಿದರು. ಈ ವೇಳೆ ಕಚೇರಿ ಮುತ್ತಿಗೆಗೆ ಪ್ರತಿಭಟನಾಕಾರರು ಯತ್ನಿಸಿದರು.

ಅಲ್ಲದೆ ಪೊಲೀಸರ ಜೀಪ್ ತಳ್ಳಾಡಿದ್ದು ಈ ವೇಳೆ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿಚಾರ್ಜ್ ಮಾಡಿ ಪ್ರತಿಭಟನಾಕಾರರನ್ನ ಚದುರಿಸಿದರು. ಇನ್ನು ಸ್ಥಳೀಯರ ಪ್ರತಿಭಟನೆಗೆ ಎಚ್ಚೆತ್ತ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯಲು ಆದೇಶ ಹೊರಡಿಸಿದೆ.

Key words: Labor death-elephant-attack-protest- Lathicharge