ನಮ್ಮ ಕಡೆ ಬೊಟ್ಟು ಮಾಡಿ ನಿಮ್ಮ ಲೋಪ ಮುಚ್ಚಿಡಬೇಡಿ- ಸಿಎಂ ಬೊಮ್ಮಾಯಿಗೆ ಸಿದ್ಧರಾಮಯ್ಯ ಟಾಂಗ್.

ಬೆಂಗಳೂರು,ಸೆಪ್ಟಂಬರ್,9,2022(www.justkannada.in):  ಬೆಂಗಳೂರಿನಲ್ಲಿ ಇಂದು ಸೃಷ್ಟಿಯಾಗಿರುವ ಈ ಪರಿಸ್ಥಿತಿಗೆ ಬಿಜೆಪಿ ಸರ್ಕಾರವೇ ಕಾರಣ. ಆದರೆ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಮ್ಮ ಕಡೆ ಬೊಟ್ಟು ಮಾಡಿ ನಿಮ್ಮ ಲೋಪ ಮುಚ್ಚಿಡಬೇಡಿ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟಾಂಗ್ ನೀಡಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಬಿಜೆಪಿ ಸರ್ಕಾರವರು ಮಳೆ ಎದುರಿಸಲು ಏನು ಮಾಡಿದ್ದಾರೆ.  ಕೆರೆ ಲಿಂಕ್ ತಪ್ಪಿರೋದು ಪ್ರವಾಹಕ್ಕೆ ಕಾರಣ.  ರಾಜಕಾಲುವೆ ಒತ್ತುವರಿ ಇಂದಿನ ಪರಿಸ್ಥಿತಿಗೆ ಕಾರಣ. ಶಾಸಕರು ಸಚಿವರು ಏನು ಮಾಡುತ್ತಿದ್ದಾರೆ ಎಂದು ಚಾಟಿ ಬೀಸಿದರು.

ಬೆಂಗಳೂರಿನಲ್ಲಿ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ದೋಣಿಯಲ್ಲಿ ಹೋಗಿದ್ದು ಗೊತ್ತಿರಲಿಲ್ಲ ಆನೇಕ ಬಡಾವಣೆಯಲ್ಲಿ ಜನರು ಸಂಕಷ್ಟದಲ್ಲಿದ್ದಾರೆ.  ಮನೆಗೆ ನೀರು ನುಗ್ಗಿ ಎಲ್ಲಾ ಹಾಳಾಗಿದೆ . ಸಿದ್ಧಾಪಪುರದಲ್ಲಿ ಯುವತಿ  ಮೃತಪಟ್ಟಿದ್ದಾಳೆ . ಆದರೆ ಸರ್ಕಾರ ಪರಿಹಾರ ನೀಡಿಲ್ಲ. ಎಲ್ಲರೂ ಶ್ರೀಮಂತರಿಲ್ಲ. ಬಡವರೂ ಇದ್ಧಾರೆ ಎಂದು ತರಾಟೆ ತೆಗೆದುಕೊಂಡರು.

ಈ ಕುರಿತು ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಸದನದ ಒಳಗೆ ಹೊರಗೆ ಹೋರಾಟ ಮಾಡುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದರು.

Key words: Bangalore-rain-former CM-Siddaramaiah- Tong -CM Bommai.