ಕುವೆಂಪು ವಿವಿಯಲ್ಲಿ ಅನುದಾನ ದುರುಪಯೋಗ ಪ್ರಕರಣ: ತನಿಖೆಗೆ ಸಮಿತಿ ನೇಮಕ

ಬೆಂಗಳೂರು, ಏಪ್ರಿಲ್,18, 2026 (www.justkannada.in): ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳಿಗಾಗಿ ನೀಡಲಾಗಿದ್ದ ಕೋಟ್ಯಾಂತರ ರೂ. ಅನುದಾನದ ದುರುಪಯೋಗದ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ರಾಜ್ಯಪಾಲರು ಹಾಗೂ ಕುವೆಂಪು ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು, ಈ ಪ್ರಕರಣದ ತನಿಖೆಗೆ ಒಬ್ಬ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಸಮಿತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರಮುಖ ಅಂಶಗಳು:

ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ ₹5 ಕೋಟಿ ಅನುದಾನ ಮಂಜೂರು

SC/ST ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ₹4.25 ಕೋಟಿ ಬಿಡುಗಡೆ

ಅನುದಾನದ ದುರುಪಯೋಗ ಕುರಿತು ಅನೇಕ ದೂರುಗಳು ಸರ್ಕಾರಕ್ಕೆ ಬಂದ ಹಿನ್ನೆಲೆ ನ್ಯಾಯಮೂರ್ತಿ ರವೀಂದ್ರನಾಥ್ ಅವರ ನೇತೃತ್ವದ ಹಿಂದಿನ ಸಮಿತಿ ದುರುಪಯೋಗ ಸಾಬೀತಾಗಿದೆ ಎಂದು ಅಭಿಪ್ರಾಯ

ಅಧಿಕಾರಿಗಳ ಸಮೂಹ ಜವಾಬ್ದಾರಿಯನ್ನು ಗುರುತಿಸಲಾಗಿದೆ

ಹೊಸ ತನಿಖಾ ಸಮಿತಿ:

ಕರ್ನಾಟಕ ಹೈಕೋರ್ಟ್‌ ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಆರ್. ಗುರುರಾಜನ್ ಅವರಿಗೆ ತನಿಖೆಯ ಜವಾಬ್ದಾರಿ

ಒಂದು ತಿಂಗಳೊಳಗೆ ವರದಿ ಸಲ್ಲಿಸಲು ಸೂಚನೆ

ತನಿಖೆಯ ವ್ಯಾಪ್ತಿ (Terms of Reference):

  1. SCSP/TSP ಅನುದಾನದ ದುರುಪಯೋಗದ ಸತ್ಯಾಸತ್ಯತೆ ಪರಿಶೀಲನೆ
  2. KTPP ಕಾಯ್ದೆಯ ಉಲ್ಲಂಘನೆಗಳ ಪರಿಶೀಲನೆ (ಖರೀದಿ, ಟೆಂಡರ್, ಪಾವತಿ)
  3. ಅಧಿಕಾರಿಗಳ ನಿರ್ಲಕ್ಷ್ಯ, ಪ್ರಾಮಾಣಿಕತೆ ಕೊರತೆ ಮತ್ತು ಜವಾಬ್ದಾರಿ ನಿಗದಿ
  4. ಅಗತ್ಯವಿದ್ದರೆ FIR ದಾಖಲಿಸುವುದು ಹಾಗೂ ನಿವೃತ್ತಿ ಲಾಭ ತಡೆ

ಇತರೆ ವಿವರಗಳು:

ಲೋಕಭವನದ ವಕೀಲ ಅಭಿಷೇಕ್ ಕುಮಾರ್ ಅವರಿಗೆ ಸಮಿತಿಗೆ ಕಾರ್ಯದರ್ಶಿ ಸಹಾಯ

ಸಮಿತಿಗೆ ಅಗತ್ಯ ಸೌಲಭ್ಯಗಳನ್ನು ಕುುವೆಂಪು ವಿಶ್ವವಿದ್ಯಾಲಯ ಒದಗಿಸಲಿದೆ

ಒಟ್ಟು ಪ್ರಕರಣ:

ಸ್ಮಾರ್ಟ್ ಕ್ಲಾಸ್ ಯೋಜನೆಗಾಗಿ ನೀಡಲಾದ ಅನುದಾನದ ದುರುಪಯೋಗ ಪ್ರಕರಣವು ಇದೀಗ ಗಂಭೀರ ತನಿಖೆಯ ಹಂತಕ್ಕೆ ಪ್ರವೇಶಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಕಠಿಣ ಕ್ರಮದ ಸಾಧ್ಯತೆ ಹೆಚ್ಚಿದೆ.

ENGLISH SUMMARY…

Breaking News | Kuvempu University Grant Misuse Case

Bengaluru, April 18, 2026:

The Karnataka Government has ordered a one-man inquiry into the alleged misuse of funds at Kuvempu University meant for Smart Class facilities.

₹5 crore (general) + ₹4.25 crore (SC/ST) grants under scrutiny

Complaints of fund misappropriation prompted action

Earlier inquiry found misuse and held officials collectively responsible

Justice R. Gururajan (Retd.) appointed to lead probe

Report to be submitted within 1 month

Scope of Inquiry:

Verify misuse of SCSP/TSP funds

Check violations in procurement and payments (KTPP Act)

Fix responsibility of officials

Recommend FIR and action, including withholding retirement benefits

#KuvempuUniversity #BreakingNews #GrantScam #Karnataka

Key words: Fund, misuse case, Kuvempu University