Thursday, August 13, 2026

BDA Apartments

Home Crime ಕಚೇರಿಯಲ್ಲೇ ಮಹಿಳಾ ಸಹದ್ಯೋಗಿಗೆ ತಹಶೀಲ್ದಾರ್ ‘ಕಿಸ್ಸಿಂಗ್’ : ವಿಡಿಯೋ ವೈರಲ್

ಕಚೇರಿಯಲ್ಲೇ ಮಹಿಳಾ ಸಹದ್ಯೋಗಿಗೆ ತಹಶೀಲ್ದಾರ್ ‘ಕಿಸ್ಸಿಂಗ್’ : ವಿಡಿಯೋ ವೈರಲ್

ಕೊಪ್ಪಳ, ಆಗಸ್ಟ್,26,2020(www.justkannada.in) ; ಸರಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಸಹೋದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ.

jk-logo-justkannada-logo

ಜಿಲ್ಲೆಯ ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲೇ  ಕುಷ್ಟಗಿ ತಹಶೀಲ್ದಾರ್ ಆಗಿದ್ದ ಗುರುಬಸವರಾಜ್ ಸಹೋದ್ಯೋಗಿಯೊಬ್ಬರಿಗೆ ಬಲವಂತವಾಗಿ ಕಿಸ್ ಮಾಡುವ ವಿಡಿಯೋ ಇಂದು ವೈರಲ್ ಆಗಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಮಹಿಳಾ ಸಿಬ್ಬಂದಿಯನ್ನ ಕಿಸ್ ಮಾಡಿ ಕಚೇರಿಯ ಘನತೆಯನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಸಂಘಟನೆಗಳು ಆಕ್ರೋಶವ್ಯಕ್ತಪಡಿಸಿದ್ದಾರೆ. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ. ಅಲ್ಲಿಂದ ವರ್ಗಾವಣೆಯಾಗಿ ಈಗ ಬಸವರಾಜ್ ಸದ್ಯ ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿದ್ದಾರೆ.

ಅಲ್ಲಿಂದ ವರ್ಗಾವಣೆಗೊಂಡ ಬಳಿಕ ಅವರ ಕಿಸ್ಸಿಂಗ್ ಸೀನ್ ಈಗ ವೈರಲ್ ಆಗಿದೆ. ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ತಮ್ಮ ಕಚೇರಿಯಯಲ್ಲಿ ಈ ರೀತಿ ಅಸಭ್ಯವಾಗಿ ವರ್ತಿಸಿ ತಮ್ಮ ಹುದ್ದೆಯ ಘನತೆಗೆ ದಕ್ಕೆ ತಂದಿದ್ದು, ಅಂತ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Key words ; Kushtagi-Tahsildar-colleague?-video-viral