ರೈತರ ಬಗ್ಗೆ ಸಚಿವ ಶಿವಾನಂದ್ ಪಾಟೀಲ್ ಹೇಳಿಕೆಗೆ ಕುರುಬೂರು ಶಾಂತಕುಮಾರ್ ಖಂಡನೆ.

ಮೈಸೂರು.ಡಿಸೆಂಬರ್,25,2023(www.justkannada.in):  ರೈತರ ಬಗ್ಗೆ ಸಕ್ಕರೆ ಸಚಿವ  ಶಿವಾನಂದ  ಪಾಟೀಲ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನ ರೈತ ಮುಖಂಡ, ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್ ಖಂಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ಶಿವಾನಂದ ಪಾಟೀಲ್ ಬಹಳ ಹಗುರವಾಗಿ ಮಾತಾಡುತ್ತಾ ಇದ್ದಾರೆ. ಇದು ಅವರ ಅವಿವೇಕದ ಪರಮಾವಧಿ. ಅವರು ಮಂತ್ರಿಯಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ರೈತರು ಏನು ಬಯಸಿ ಬಯಸಿ ಬಂದು ಸಾಲಮನ್ನಾ ಮಾಡಿ ಅಂತ ಹೇಳೋದಿಲ್ಲ. ಪ್ರಕೃತಿಯಲ್ಲಿ ಆಗುವ ಬದಲಾವಣೆಗಳಿಂದ ತೊಂದರೆಗೀಡಾಗಿ ಹಾಕಿದ ಫಸಲು ಕೈಗೆ ಸಿಗದೆ ಸಾಲ ಕಟ್ಟಲು ಸಾಧ್ಯವಾಗದೆ ರೈತರು ತಮ್ಮ ಬೇಡಿಕೆಗಳನ್ನ ಆಗ್ರಹಿಸುತ್ತಾರೆ ಎಂದರು.

ನೀವು ಪದೇ ಪದೇ ಈ ರೀತಿ ರೈತರ ಬಗ್ಗೆ ಹಗುರವಾಗಿ ಮಾತನಾಡುವುದನ್ನ ನಿಲ್ಲಿಸಬೇಕು. ಈ‌  ಕೂಡಲೇ ರಾಜ್ಯದ ರೈತರ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲ ಅಂದರೆ ನಿಮ್ಮನ್ನ ಮಂತ್ರಿ ಕಚೇರಿಯಿಂದ ಹೊರಗೆ ಹಾಕುವ ಕೆಲಸ ಮಾಡಬೇಕಾಗುತ್ತದೆ ಎಂದು ಕುರುಬೂರು ಶಾಂತಕುಮಾರ್ ಹರಿಹಾಯ್ದರು.

Key words: Kuruburu Shanthakumar- condemns- Minister Shivanand Patil- statement