ಎಸ್ ಟಿ ಮೀಸಲಾತಿಗಾಗಿ ಕುರುಬ ಸಮುದಾಯ ಪಾದಯಾತ್ರೆ: ಇತ್ತ ಹಲವೆಡೆ ಟ್ರಾಫಿಕ್ ಜಾಮ್ …

ಬೆಂಗಳೂರು,ಫೆಬ್ರವರಿ,3,2021(www.justkannada.in):  ಎಸ್.ಟಿ ಮೀಸಲಾತಿಗೆ ಆಗ್ರಹಿಸಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಕುರುಬ ಸಮುದಾಯ ಪಾದಯಾತ್ರೆ ನಡೆಸುತ್ತಿದ್ದು, ಇದೀಗ ಪಾದಯಾತ್ರೆ ಬೆಂಗಳೂರಿನ ಇಸ್ಕಾನ್ ಟೆಂಪಲ್ ಗೆ ತಲುಪಿದೆ.jk

ಇತ್ತ ಕುರುಬ ಸಮುದಾಯ ಪಾದಯಾತ್ರೆ ನಡೆಸುತ್ತಿದ್ದರೇ ಅತ್ತ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಜಾಜಿನಗರ, ಇಸ್ಕಾನ್ ಟೆಂಪಲ್ ರಸ್ತೆ, ಸೋಪ್ ಫ್ಯಾಕ್ಟರಿ ಜಂಕ್ಷನ್ ಬಳಿ ಟ್ರಾಫಿಕ್ ಬಿಸಿ ತಟ್ಟಿದ್ದು ವಾಹನ ಸವಾರಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೃಪೆ- internet

ಜನವರಿ 15 ರಂದು ಕಾಗಿನೆಲೆಯಲ್ಲಿ ಆರಂಭಗೊಂಡಿದ್ದ ಪಾದಯಾತ್ರೆ ಇಂದು ಬೆಂಗಳೂರು ತಲುಪಿದ್ದು, ಇಸ್ಕಾನ್ ಟೆಂಪಲ್ ನಿಂದ ಪಾದಯಾತ್ರೆ ಫ್ರೀಡಂಪಾರ್ಕ್ ನತ್ತ ತೆರಳಲಿದೆ.  ಇಸ್ಕಾನ್ ಬಳಿ ಜಾಗೃತ ಸಭೆ ನಡೆಯಲಿದ್ದು, ಅಲ್ಲಿ ಸ್ವಲ್ಪಹೊತ್ತು ವಿಶ್ರಾಂತಿ ಪಡೆದು ನಂತರ ಪಾದಯಾತ್ರೆ ಮುಂದುವರಿಯಲಿದೆ ಎನ್ನಲಾಗಿದೆ.

Key words: kuruba Community – ST- Reservation-bangalore-padayatre- Traffic jams