ಮೈಸೂರಿನಲ್ಲಿ ಪತ್ರಕರ್ತನ ಮೇಲೆ ಪೊಲೀಸರ ದುಂಡಾವರ್ತನೆ ಪ್ರಕರಣ: ಕ್ರಮಕ್ಕೆ ಒತ್ತಾಯಿಸಿ ಕೆಯುಡಬ್ಲ್ಯೂಜೆ ಅಧ್ಯಕ್ಷರಿಂದ ಗೃಹ ಸಚಿವರಿಗೆ ಪತ್ರ

ಬೆಂಗಳೂರು, ಏಪ್ರಿಲ್ 19, 2020 (www.justkannada.in): ಕಾರ್ಯ ನಿರ್ವಹಣೆ ವೇಳೆ ಪತ್ರಕರ್ತರಿಗೆ ಆಗುತ್ತಿರುವ ಪೊಲೀಸರ ಕಿರುಕುಳದ ಕೆಯುಡಬ್ಲ್ಯೂಜೆ ಅಧ್ಯಕ್ಷರಾದ ಶಿವಾನಂದ ತಗಡೂರ್ ನೇತೃತ್ವದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಮನವಿ ಸಲ್ಲಿಸಲಾಯಿತು.

ಕೆಯುಡಬ್ಲ್ಯೂಜೆ ಅಧ್ಯಕ್ಷರು ಬರೆದಿರುವ ಪತ್ರ ಇಂತಿದೆ…

ಕರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮಾಧ್ಯಮಗಳು ತಮ್ಮ ಜವಾಬ್ದಾರಿಯಿಂದ ವಿಮುಖವಾಗದೆ, ಇನ್ನೂ
ಹೆಚ್ಚು ಹೊಣೆಗಾರಿಕೆಯಿಂದ ಕೆಲಸಮಾಡುತ್ತಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ,
ಮಾಧ್ಯಮ ಕೂಡ ಅಗತ್ಯ ಸೇವೆಯಲ್ಲಿದೆ ಎಂದು ಹೇಳಿದ್ದಾರೆ. ಕರ್ನಾಟಕ ಸರ್ಕಾರ ಕೂಡ ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದೆ.

ಆದರೂ ಕೆಲವು ಕಡೆ ವೃತ್ತಿ ನಿರತ ಮಾಧ್ಯಮದವರನ್ನು ಅಡ್ಡಗಟ್ಟಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ, ಹಲ್ಲೆ ಮಾಡಿರುವ ಪ್ರಕರಣಗಳು ವರದಿಯಗುತ್ತಿರುವುದು, ಕಳವಳಕಾರಿ ಮತ್ತು ಖಂಡನೀಯ.

ಮೈಸೂರು ಕುವೆಂಪುನಗರದ ಜ್ವಾನಗಂಗಾ ಶಾಲೆ ಬಳಿ ಕರ್ತವ್ಯ ಮೇಲೆ ಹೋಗುತ್ತಿದ್ದ ನ್ಯೂಸ್ 1 ಚಾನೆಲ್ ನ ವರದಿಗಾರ
ಯಶ್ ಅವರನ್ನು ತಡೆದ ಪೊಲೀಸ್ ಪೇದೆಯೊಬ್ಬರು, ಅವಾಚ್ಯವಾಗಿ ನಿಂಧಿಸಿದ್ದಾರೆ.
ಅಲ್ಲದೆ, ಯಶ್ ನನ್ನು ಠಾಣೆಗೆ ಕರೆದುಕೊಂಡು ಹೋಗಿ ಮೂರು ಗಂಟೆಗಳ ಕಾಲ ಕೂರಿಸಿಕೊಂಡಿದ್ದು ಖಂಡನೀಯ.

ಪತ್ರಕರ್ತರ ಕರ್ತವ್ಯಕ್ಕೆ ಲೋಪವಾಗದಂತೆ ನೋಡಿಕೊಳ್ಳಿ ಎಂದು ಕೇಂದ್ರ, ರಾಜ್ಯ ಸರ್ಕಾರಗಳು ಹೇಳಿದ್ದರೂ, ಪೊಲೀಸ್ ಮೇಲಾಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಾದ ಸೂಚನೆ ನೀಡಿದ್ದರೂ, ಅಲ್ಲಲ್ಲಿ ತಳಮಟ್ಟದ ಪೊಲೀಸರಿಂದ ಸಮಸ್ಯೆ ಆಗುತ್ತಿರುವುದು ನೋವಿನ ಸಂಗತಿ.

ಮೈಸೂರು ಯಶ್ ಪ್ರಕರಣದಲ್ಲಿ
ದುಂಡಾ ವರ್ತನೆ ತೋರಿದ ಪೊಲೀಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಆಗ್ರಹಿಸಿದೆ.