ವಿಟಿಯು ಕುಲಪತಿ ಡಾ.ವಿದ್ಯಾಶಂಕರ್ ಹಾಜರಾತಿಗೆ ಹೈಕೋರ್ಟ್ Emergent Notice..!

ಬೆಂಗಳೂರು, ಆ.13, 2023 : (www.justkannada.in news) ಉಚ್ಚ ನ್ಯಾಯಾಲಯದಿಂದ ಬೆಳಗಾವಿಯ ವಿಟಿಯು ಕುಲಪತಿ ಡಾ. ವಿದ್ಯಾಶಂಕರ್ (Dr.Vidyashankar) ಅವರನ್ನು ರಿಟ್ ಅಪೀಲ್ (Writ Appeal) ಒಂದರಲ್ಲಿ ವೈಯಕ್ತಿಕ ಸ್ತರದಲ್ಲಿ (Individual capacity) ಪ್ರತಿವಾದಿಯನ್ನಾಗಿಸಲು ಆದೇಶಿಸಲಾಗಿದೆ.
01.8.2023 ರಂದು ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ತಮ್ಮ ಮುಂದೆ ವಿಚಾರಣೆಗೆ ಬಂದಿದ್ದ ರಿಟ್ ಅರ್ಜಿ 510/2020 ರಲ್ಲಿ ಈ ಆದೇಶ ಮಾಡಲಾಗಿದೆ.
ಪ್ರಕರಣದ ಸಾರಾಂಶ :-
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU)ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ರಂಗಸ್ವಾಮಿ ಅವರು ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ ಗಳ ಕುಲಪತಿ ಹುದ್ದೆಗೆ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಮುಕ್ತ ವಿವಿಯ ಅಂದಿನ ಕುಲಪತಿ ಡಾ. ವಿದ್ಯಾಶಂಕರ್ ಹಾಗೂ ಕುಲಸಚಿವ ಡಾ.ಲಿಂಗರಾಜ ಗಾಂಧಿ ಅವರು ಯುಕ್ತ ಮಾರ್ಗ (Proper Channel) ಮೂಲಕ ಉನ್ನತ ಶಿಕ್ಷಣ ಇಲಾಖೆಗೆ ರವಾನಿಸುವ ಸಂದರ್ಭದಲ್ಲಿ ಪ್ರೊಫೆಸರ್ ಎ ರಂಗಸ್ವಾಮಿ ಅವರ ವಿರುದ್ಧ ವಿಭಾಗೀಯ ತನಿಖೆ ( Departmental enquiry) ಪೆಂಡಿಂಗ್ ಇರುತ್ತದೆ ಎಂಬ ಷರಾದೊಂದಿಗೆ ಅರ್ಜಿಗಳನ್ನು ರವಾನಿಸಲಾಗಿತ್ತು.

ಇದನ್ನು ಪ್ರಶ್ನಿಸಿ ತಮ್ಮ ಮೇಲೆ ಇಲ್ಲದಿರುವ ಇಲಾಖಾ ವಿಚಾರಣೆಯ ಸುಳ್ಳು ಷರಾವನ್ನು ಬರೆದು ನನ್ನ ಅರ್ಜಿಗಳನ್ನು ಸರ್ಕಾರಕ್ಕೆ ರವಾನಿಸಲಾಗಿದೆ ಅದನ್ನು ರದ್ದುಗೊಳಿಸಿ ಹಾಗೂ ಸದರಿ ಕುಲಪತಿ ಹುದ್ದೆಗಳಿಗೆ ನನ್ನನ್ನು ಪರಿಗಣಿಸಲು ಶೋಧನಾ ಸಮಿತಿಗೆ ನಿರ್ದೇಶಿಸಬೇಕೆಂದು ಡಾ.ರಂಗಸ್ವಾಮಿ ಅವರು ಸಲ್ಲಿಸಿದ್ದ ರಿಟ್ ಅರ್ಜಿ W.P 8728/ 2020 ರಲ್ಲಿ ಉಚ್ಚನ್ಯಾಯಾಲಯದ ಏಕ ಸದಸ್ಯ ಪೀಠವು 7/9/ 2020 ರಂದು 33 ಪುಟಗಳ ತೀರ್ಪು ಹೊರಡಿಸಿ ರಿಟ್ ಅರ್ಜಿದಾರ ಡಾ. ರಂಗಸ್ವಾಮಿ ಅವರ ಮೇಲೆ ಮಾಡಿದ್ದ ಅಡ್ವರ್ಸ್ ರಿಮಾಕ್ಸ್ ಅನ್ನು ಸುಳ್ಳು, ದುರುದ್ದೇಶಪೂರಿತ ಹಾಗೂ ಹಾಗೂ ದಾರಿ ತಪ್ಪಿಸುವ (False, Misleading, malafide & obliquely motivated ) ಕ್ರಮ ಎಂದು ತಿಳಿಸಿ , ಕುಲಪತಿ ಹುದ್ದೆಗಳಿಗೆ ಅವರ ಅರ್ಜಿಗಳನ್ನು ಪರಿಗಣಿಸುವಂತೆ ಸಂಬಂಧ ಪಟ್ಟ ಶೋಧನಾ ಸಮಿತಿಗಳಿಗೆ ಆದೇಶಿಸಿತ್ತು.
ಮುಂದುವರಿದು ಸದರಿ ರಿಟ್ ಪ್ರಕರಣದ ನಾಲ್ಕನೇ ಪ್ರತಿವಾದಿ ಕರಾಮುವಿವಿ ಅಂದಿನ ಕುಲಸಚಿವ ಹಾಗೂ ಹಾಲಿ ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯದ ಕುಲಪತಿ ಡಾ. ಲಿಂಗರಾಜ ಗಾಂಧಿ ಅವರ ವಿರುದ್ಧ ಇಲಾಖಾ ಕ್ರಮ ಜರುಗಿಸಲು ಶಿಸ್ತು ಪ್ರಾಧಿಕಾರಕ್ಕೆ ಆದೇಶಿಸಿತ್ತು.
ಸದರಿ ಏಕ ಸದಸ್ಯ ಪೀಠದ ತೀರ್ಪಿನ ವಿರುದ್ಧ ಸಲ್ಲಿಸಿರುವ ರಿಟ್ ಅರ್ಜಿ (Writ Appeal 510/ 2020) ಪ್ರಕರಣದಲ್ಲಿ ಕರಾಮುವಿಯ ವಿವಾದಿತ ಕಡತಗಳನ್ನು ಪರಿಶೀಲಿಸಿದ ಉಚ್ಚ ನ್ಯಾಯಾಲಯದ ದಿವಸದಸ್ಯ ಪೀಠ 01.08.2020 ರಂದು ಮುಕ್ತ ವಿವಿಯ ಅಂದಿನ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರ ಕಾರ್ಯ ವೈಖರಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ, ಈ ಬಗ್ಗೆ ಮುಂದುವರೆಯುವ ಮುನ್ನ ಡಾ. ವಿದ್ಯಾಶಂಕರವರ ಹೇಳಿಕೆಯನ್ನು ಪಡೆಯುವುದು ಸೂಕ್ತವಾಗಿದ್ದು (“the Actions of the then Vice Chancellor Prof.Vidyashankar.S raise concerns in the court . Hence, before proceeding further we deem it appropriate to call upon the said Prof.Vidyashankar.s to have his say, before this court proceeds to make any observations”) ಎಂದು ದಾಖಲಿಸಿ ಅವರನ್ನು Respondent ಆಗಿಸಲು ಹಾಗೂ ಅವರ ಹಾಜರಾತಿಗೆ Emergent Notice ಹೊರಡಿಸಲು ಆದೇಶಿಸಿ ಪ್ರಕರಣ ವಿಚಾರಣೆಯನ್ನು 17.8.2023ಕ್ಕೆ ನಿಗದಿಪಡಿಸಲಾಗಿದೆ.
ಉಚ್ಚ ನ್ಯಾಯಾಲಯದ ಆದೇಶದನ್ವಯ VTU ಕುಲಪತಿ ಡಾ. ವಿದ್ಯಾಶಂಕರ್ ವೈಯುಕ್ತಿಕ ಸ್ತರದಲ್ಲಿ ಪ್ರಕರಣದಲ್ಲಿ ನಿಯಮಾನಸಾರ ತಮ್ಮ ಹಾಜರಾತಿ ಹಾಗೂ ಹೇಳಿಕೆ ದಾಖಲಿಸಬೇಕಿದೆ.
ಡಾ ವಿದ್ಯಾಶಂಕರ್ ಅವರ ವಿಟಿಯು ಕುಲಪತಿ ಹುದ್ದೆಯ ನೇಮಕಾತಿ ಪ್ರಶ್ನಿಸಿ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ.ಮಹಾದೇವ ಅವರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಬಾಕಿಯಿರುವ ಬೆನ್ನಲ್ಲೇ ಡಾ.ವಿದ್ಯಾಶಂಕರ್ ವಿರುದ್ಧ ಮತ್ತೊಂದು ಪ್ರಕರಣದಲ್ಲಿ ಹೈಕೋರ್ಟ್ ಈ ಮೇಲಿನ ಆದೇಶ ಹೊರಡಿಸಿರುವುದು ಗಮನಾರ್ಹ.
ಇದು ಪ್ರಸ್ತುತ ರಾಜ್ಯದ ಉನ್ನತ ಶೈಕ್ಷಣಿಕ ವಲಯಗಳಲ್ಲಿ ಬಹು ಚರ್ಚಿತ ವಿಷಯವಾಗಿದೆ.

Key words : KSOU-VTU-VC-VIDHYASHANKAR-HIGH.COURT