KSOU: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ “ಉಚಿತ ಶಿಕ್ಷಣ” ಗ್ಯಾರಂಟಿ.

An agreement has been signed between the state Minority Welfare Department and Karnataka State Open University (KSOU) to provide free education to minority community students studying in the university. The department has sanctioned a grant of Rs. 5 crores to provide free education in various courses of the university to six minority groups including Muslims, Sikhs, Jains and Christians. The agreement in this regard was signed on July 9

vtu

ಮೈಸೂರು, ಜು.೧೦,೨೦೨೫:  ಇನ್ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಗ್ಯಾರಂಟಿ.  ಮುಸ್ಲಿಂ, ಸಿಖ್, ಜೈನ ಮತ್ತು ಕ್ರಿಶ್ಚಿಯನ್ ಸೇರಿದಂತೆ ಆರು ಅಲ್ಪಸಂಖ್ಯಾತ ವರ್ಗಗಳಿಗೆ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳಲ್ಲಿ ಈ ಸಾಲಿನಿಂದಲೇ  ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಈ ಸಂಬಂಧ “ ಜಸ್ಟ್‌ ಕನ್ನಡ”  ಜತೆ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ ಹೇಳಿದಿಷ್ಟು..

ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಲು ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ನಡುವೆ  ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಮುಸ್ಲಿಂ, ಸಿಖ್, ಜೈನ ಮತ್ತು ಕ್ರಿಶ್ಚಿಯನ್ ಸೇರಿದಂತೆ ಆರು ಅಲ್ಪಸಂಖ್ಯಾತ ವರ್ಗಗಳಿಗೆ ವಿವಿಯ ವಿವಿಧ ಕೋರ್ಸ್‌ಗಳಲ್ಲಿ ಉಚಿತ ಶಿಕ್ಷಣವನ್ನು ಒದಗಿಸಲು ಇಲಾಖೆ ಐದು ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದೆ. ಈ ಸಂಬಂದ ಜುಲೈ 9 ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ

ಇಲಾಖೆ ನೀಡುವ ಅನುದಾನದಿಂದ ಒಟ್ಟು 4,500 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅತ್ಯಮೂಲ್ಯ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದಂತಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಅರ್ಹತೆ ಆಧಾರದ ಮೇಲೆ ಪ್ರವೇಶ ನೀಡಲಾಗುವುದು ಎಂದರು.

ಈ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಹಾಜರಿದ್ದು, ಮುಂದಿನ ವರ್ಷವೂ ಅನುದಾನ ನೀಡುವ ಆಶ್ವಾಸನೆ ನೀಡಿದರು ಎಂದು ಕುಲಪತಿ ಪ್ರೊ.ಶರಣಪ್ಪ ಹಲ್ಸೆ ತಿಳಿಸಿದರು.

ಅರ್ಹ ಅಭ್ಯರ್ಥಿಗಳು www.ksoumysuru.ac.in ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಅಥವಾ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಬಹುದು.

ಅಲ್ಪಸಂಖ್ಯಾತ ಕೋಶ :

ವಿಶ್ವವಿದ್ಯಾನಿಲಯದಲ್ಲಿ ಎಸ್‌ಸಿ-ಎಸ್‌ಟಿ ಮತ್ತು ಒಬಿಸಿ ಜೊತೆಗೆ ವಿದ್ಯಾರ್ಥಿವೇತನ ಸೌಲಭ್ಯಗಳೊಂದಿಗೆ ಅಲ್ಪಸಂಖ್ಯಾತ ಕೋಶ ಸ್ಥಾಪಿಸಲಾಗಿದೆ. ಜನವರಿ ಮತ್ತು ಜುಲೈನಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಜುಲೈ ಆವೃತ್ತಿಯ ಪ್ರವೇಶಗಳು ಪ್ರಾರಂಭವಾಗಿದ್ದು ಪ್ರವೇಶಾತಿಗೆ ಸೆಪ್ಟೆಂಬರ್ 15 ಕೊನೆಯ ದಿನ. ಶುಲ್ಕ ಪಾವತಿ ಸೇರಿದಂತೆ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ಮತ್ತು ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಗಳು ಮತ್ತು ಕಲಿಕಾರ್ಥಿ ಸಹಕಾರಿ ಕೇಂದ್ರಗಳೊಂದಿಗೆ ಸಂಪರ್ಕದ ಮೂಲಕ ಮಾಡಲಾಗುತ್ತದೆ.

ಉದ್ಯೋಗ ಕೋಶ :

ವಿಶ್ವವಿದ್ಯಾಲಯವು ಸ್ಪರ್ಧಾತ್ಮಕ ಕೋರ್ಸ್‌ಗಳನ್ನು, ವಿಶೇಷವಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊಂದಿದೆ.ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವರಿಗೆ ಉದ್ಯೋಗ ಒದಗಿಸಲು ಉದ್ಯೋಗ ಕೋಶವನ್ನು ಪ್ರಾರಂಭಿಸಲಾಗಿದೆ.

ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮ, ಭೂ ವಿಜ್ಞಾನ ಮತ್ತು ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಪ್ರಾರಂಭಿಸುವುದರ ಜೊತೆಗೆ ಡಿಸೆಂಬರ್‌ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲು ಸಹ ನಿರ್ಧರಿಸಲಾಗಿದೆ ಎಂದರು.

ಸ್ವಯಂ ಆರ್ಥಿಕ ಸಂಪನ್ಮೂಲ :

“ವಿಶ್ವವಿದ್ಯಾಲಯದಲ್ಲಿ 1,500 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಎಲ್ಲವನ್ನೂ ವಿಶ್ವವಿದ್ಯಾಲಯವೇ ಆರ್ಥಿಕ ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ಮೂಲಕ ನಿರ್ವಹಿಸುತ್ತಿದೆ. ಎಲ್ಲಾ ಅಂಶಗಳಲ್ಲಿ ಪಾರದರ್ಶಕತೆಯೂ ಇದೆ. ವಿದ್ಯಾರ್ಥಿಗಳಿಗೆ ಫಲಿತಾಂಶಗಳನ್ನು ತ್ವರಿತವಾಗಿ ಪ್ರಕಟಿಸಲು ಅನುಕೂಲವಾಗುವಂತೆ ಮೌಲ್ಯಮಾಪನವನ್ನು ಡಿಜಿಟಲೀಕರಣಗೊಳಿಸಲಾಗಿದೆ. 2025-26ನೇ ಸಾಲಿನ ವಿವಿಧ ಕೋರ್ಸ್‌ಗಳಿಗೆ ಪ್ರವೇಶವನ್ನು ವಿಶ್ವವಿದ್ಯಾಲಯದ 37 ಪ್ರಾದೇಶಿಕ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಎಂದರು.

ಯಾವ ಯಾವ ಕೋರ್ಸ್:

ಪದವಿ ಕೋರ್ಸ್‌ಗಳಲ್ಲಿ, ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ, ಬಿಎಸ್ಡಬ್ಲ್ಯೂ, ಬಿಎಲ್ಐಬಿ, ಬಿಎಸ್ಸಿ ಇನ್ ಇನ್ಫಾರ್ಮೇಶನ್ ಟೆಕ್ನಾಲಜಿಗೆ‌ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು.

ಸ್ನಾತಕೋತ್ತರ ಪದವಿಯಲ್ಲಿ, ಎಂಎ, ಎಂಕಾಂ, ಎಂಬಿವಿ, ಎಂಎಸ್ಸಿ, ಎಂಎಲ್ಐಬಿ, ಎಂಸಿಎ ಮತ್ತು ಎಂಎಸ್ಡಬ್ಲ್ಯೂ ಸೇರಿದಂತೆ ಒಟ್ಟು 70 (ಮುಕ್ತ ಮತ್ತು ದೂರಶಿಕ್ಷಣ) ಕೋರ್ಸ್‌ಗಳಿಗೆ ಪ್ರವೇಶ ಲಭ್ಯವಿದೆ. ಜತೆಗೆ 10 ಆನ್‌ಲೈನ್ ಕೋರ್ಸ್‌ಗಳಿದ್ದು, ವಿದ್ಯಾರ್ಥಿಗಳಿಗೆ ಸ್ವಯಂ ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದು ಕುಲಪತಿ ಪ್ರೊ. ಶರಣಪ್ಪ ಹಲಸೆ ವಿವರಿಸಿದರು.

key words:  agreement, signed, state Minority Welfare Department, Karnataka State Open University (KSOU), free education, minority community students, Prof, sharanappa halse, VC

vtu

SUMMARY:

From now on, free education is guaranteed to minority community students at the Karnataka State Open University. From this year itself, free education is being provided to six minority groups including Muslim, Sikh, Jain and Christian in various courses of the university.

An agreement has been signed between the state Minority Welfare Department and Karnataka State Open University (KSOU) to provide free education to minority community students studying in the university.

The department has sanctioned a grant of Rs. 5 crores to provide free education in various courses of the university to six minority groups including Muslims, Sikhs, Jains and Christians. The agreement in this regard was signed on July 9.