Friday, August 14, 2026

BDA Apartments

Home Front Page ಬಿಜೆಪಿ ಪಕ್ಷದ ಈಗಿನ ಸ್ಥಿತಿ ನೋಡಿದ್ರೆ ದುಃಖ ಆಗುತ್ತೆ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಬಿಜೆಪಿ ಪಕ್ಷದ ಈಗಿನ ಸ್ಥಿತಿ ನೋಡಿದ್ರೆ ದುಃಖ ಆಗುತ್ತೆ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಬೆಳಗಾವಿ,ಜನವರಿ,28,2025 (www.justkannada.in):  ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ, ಗೊಂದಲ ಹಿನ್ನೆಲೆಯಲ್ಲಿ ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆ.ಸ್ ಈಶ್ವರಪ್ಪ, ಬಿಜೆಪಿ ಪಕ್ಷದ ಈಗಿನ ಸ್ಥಿತಿ ನೋಡಿದ್ರೆ ದುಃಖ ಆಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡದ ಜಿಡಗಾ ಮಠದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಬಿಜೆಪಿ ನಾನೇ ಕಟ್ಟಿ ಬೆಳೆಸಿದ್ದೇನೆ ಎಂಬ ಅಹಂಕಾರ ನನ್ನಲ್ಲಿ ಇಲ್ಲ. ನನ್ನಂತೆ ಸಾಕಷ್ಟು ಹಿರಿಯರು ತಪಸ್ಸು ಮಾಡಿ ಬಿಜೆಪಿ ಪಕ್ಷ ಕಟ್ಟಿದ್ದಾರೆ. ಈಗಿನ ಪರಿಸ್ಥಿತಿ ನೋಡಿದ್ರೆ ಅವರಿಗೆಲ್ಲ ಬೇಸರ ಇದೆ, ನೋವು ಇದೆ, ಆ ನೋವು ಯಾರ ಹತ್ತಿರ ಹೇಳಿಕೊಳ್ಳಬೇಕು ಎಂಬ ಗೊಂದಲ ಇದೆ. ಬಿಜೆಪಿ ನನ್ನ ತಾಯಿ, ಮೊದಲಿನಂತೆ ಪಕ್ಷದ ಸಿದ್ದಾಂತ ಪ್ರಕಾರ ಎಲ್ಲವೂ ಸರಿ ನಡೆದರೆ ಪಕ್ಷಕ್ಕೆ ಬರುವೆ ಎಂದರು.

ಬಿಜೆಪಿ ಮನೆಯೊಂದು ಆರು ಬಾಗಿಲು ಎಂಬ ಕಾಂಗ್ರೆಸ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ,  ದೇಶದಲ್ಲಿ ಬಿಜೆಪಿ ಒಂದೇ ಇದೆ. ಅದೇ ಕಾಂಗ್ರೆಸ್ ಎಷ್ಟು ಇದೆ ನೂರಾರು ಕಾಂಗ್ರೆಸ್ ಇದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಬಾಗಿಲು ಇದೆಯಾ, ಅವರ ಪಕ್ಷದ ಬಾಗಿಲುಗಳ ಲೆಕ್ಕ ಹಾಕಲಿ. ಅಂತವರು ಬಿಜೆಪಿ ಬಗ್ಗೆ ಆಪಾದನೆ ಮಾಡುವ ಸ್ಥಿತಿಗೆ ಬಂದಿದ್ದಕ್ಕೆ ನನಗೂ ನೋವಿದೆ. ಇದು ಸರಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಇವತ್ತಲ್ಲ ನಾಳೆ ಬಿಜೆಪಿ ಪಕ್ಷ ಎಲ್ಲವೂ ಸರಿ ಹೋಗುತ್ತೆ ಎನ್ನುವ ವಿಶ್ವಾಸ ನನಗಿದೆ ಎಂದರು.

ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವುದು ಕೆಲವ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ನಾನು ಮೊದಲಿನಿಂದಲೂ ಹೇಳುತಿದ್ದೇನೆ ಬಿಜೆಪಿ ತಂದೆ ಮಕ್ಕಳ ಪಕ್ಷ ಆಗಿದೆ. ಅದು ಪಕ್ಷದ ಆಂತರಿಕ ವಿಚಾರ ಅವರೇ ತೀರ್ಮಾನ ಮಾಡಲಿ. ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟಾಚಾರ ಆರೋಪಗಳು ಹೆಚ್ಚು ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಹುಟ್ಟಿದಾಗಿನಿಂದಲೂ ಭ್ರಷ್ಟಾಚಾರ ಮಾಡುತ್ತಿದೆ. ಮಹಾತ್ಮ ಗಾಂಧೀಜಿ ಅವತ್ತೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಅಂತಾ ಹೇಳಿದ್ದರು ಎಂದರು.

Ket words: current state, BJP party – Former Minister, KS Eshwarappa