Sunday, August 23, 2026

BDA Apartments

Home Front Page ರಾಜಭವನಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ: ಕಾರಣ ನಿಗೂಢ !

ರಾಜಭವನಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ: ಕಾರಣ ನಿಗೂಢ !

ಬೆಂಗಳೂರು, ಫೆಬ್ರವರಿ 22, 2022 (www.justkannada.in): ಸಚಿವ ಕೆ.ಎಸ್.ಈಶ್ವರಪ್ಪ ಅವರು ಹಠಾತ್ ರಾಜಭವನಕ್ಕೆ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರ ನೇಮಕ ಚರ್ಚೆ ಅಥವಾ ಶಿವಮೊಗ್ಗ ಘಟನೆ ಬಗ್ಗೆ ವರದಿ ನೀಡುವುದಕ್ಕಾಗಿ ರಾಜ್ಯಪಾಲರ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ತಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹಠಾತ್ ರಾಜಭವನಕ್ಕೆ ಭೇಟಿ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ರಾಜ್ಯಪಾಲರ ಭೇಟಿಗೆ ಈಶ್ವರಪ್ಪ ತೆರಳಿರುವುದರ ಉದ್ದೇಶ ಏನೆಂಬುದು ತಿಳಿದು ಬಂದಿಲ್ಲ.