ಕೆ.ಎಸ್ ಈಶ್ವರಪ್ಪ, ಸಿದ್ಧೇಶ್ವರ್ ಅವರ ವಿಚಾರ ಒಪ್ಪಲ್ಲ- ಶಾಸಕ ಸಿ.ಟಿ ರವಿ.

ಬೆಂಗಳೂರು,ಆ,1,2022(www.justkannada.in): ರಾಜೀನಾಮೆಯಿಂದ ತೊಂದರೆ ಇಲ್ಲ ಎಂದು ಬಿಜೆಪಿ ಕಾರ್ಯಕರ್ತರ ಬಗ್ಗೆ ಹೇಳಿಕೆ ನೀಡಿದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಸಂಸದ ಸಿದ್ಧೇಶ್ವರ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿ.ಟಿ ರವಿ,  ಕೆ.ಎಸ್ ಈಶ್ವರಪ್ಪ, ಸಿದ್ಧೇಶ್ವರ್ ವಿಚಾರ ಒಪ್ಪಲ್ಲ. ದುರುದ್ಧೇಶವಾಗಿ ಹೇಳಿಕೆ ನೀಡಿದ್ರೆ ಸರಿಯಲ್ಲ. ಅಂಥವರ ವಿರುದ್ದ ಪಕ್ಷದ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸಿದ್ಧಾಂತದ ವಿರುದ್ಧ ಹೋರಾಟ ಮಾಡಬೇಕು ಎಂದರು.

ಬಿಜೆಪಿ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಟ್ವಿಟ್ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಚಕ್ರವರ್ತಿಸೂಲಿಬೆಲೆ ವೈಚಾರಿಕವಾಗಿ ಅಪ್ಪಟ ದೇಶಭಕ್ತ. ಸೂಲಿಬೆಲೆ ಹತ್ತಿರ ಮಾತನಾಡುತ್ತೇವೆ. ಯಾವ ಕಾರ್ಯಕರ್ತರನ್ನ ಬಿಟ್ಟುಕೊಡೋದಿಲ್ಲ.  ನಮ್ಮದು ಕಾರ್ಯಕರ್ತರಾದಾರಿತ ಪಕ್ಷ. ಕೆಲವರನ್ನ ಕುಳ್ಳರಿಸಿಕೊಂಡು ಮಾತನಾಡಬೇಕು. ದವಡೆಯೂ ನಮ್ಮದೆ ನಾಲಿಗೆಯೂ ನಮ್ಮದೆ. ದವಡೆ ನಾಲಿಗೆ ಕಚ್ಚಿತು ಅಂದ್ರೆ ಏನು ಮಾಡೋಕೆ ಆಗಲ್ಲ ಎಂದರು.

Key words: KS Eshwarappa-Siddheshwar- statement- not –agreed-MLA- CT Ravi