ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ ಹೆಚ್ಚಳ, ಕಬಿನಿ ಭರ್ತಿಗೆ 4 ಅಡಿ ಬಾಕಿ

ಮೈಸೂರು,ಜುಲೈ,4,2024 (www.justkannada.in): ಕಳೆದ ಬಾರಿ ಕೈಕೊಟ್ಟಿದ್ದ ಮುಂಗಾರು ಮಳೆ  ಈ ಬಾರಿ ಉತ್ತಮವಾಗಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದು ರೈತರ ಮೊಗದಲ್ಲಿ ಮಂದಹಾಸ ತರಿಸಿದೆ. ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದು ಜಲಾಶಯಗಳಿಗೆ ಜೀವ ಕಳೆ ಬಂದಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ ಹೆಚ್ಚಳವಾಗಿದೆ. ನೀರಿನ ಮಟ್ಟ ನೂರು ಅಡಿ ಸನಿಹಕ್ಕೆ ಬಂದಿದೆ.

ಒಂದೇ ವಾರದಲ್ಲಿ ಕೆಆರ್​ಎಸ್​​  ಜಲಾಶಯಕ್ಕೆ 12 ಅಡಿಯಷ್ಟು ನೀರು ಬಂದಿದ್ದು ಸದ್ಯ 99.30 ಅಡಿ ತಲುಪಿದೆ. ಇನ್ನು  ಕಬಿನಿ ಜಲಾಶಯದ ನೀರಿನ ಮಟ್ಟ ಸಹ ಹೆಚ್ಚಳವಾಗಿದ್ದು ನೀರಿನ ಮಟ್ಟ 80 ಅಡಿ ತಲುಪಿದೆ  ಕಬಿನಿ ಡ್ಯಾಂ ಸಂಪೂರ್ಣ ಭರ್ತಿಗೆ 4 ಅಡಿ ಮಾತ್ರ ಬಾಕಿ ಇದ್ದು ಇನ್ನು 2-3 ದಿನದಲ್ಲಿ ಭರ್ತಿ ಆಗುವ ಸಾಧ್ಯತೆ ಇದೆ.

Key words: KRS Dam, water level, increase,