Thursday, September 17, 2026

BDA Apartments

ಕೆರೆಯಲ್ಲಿ ಬಿದ್ದು ಅಣ್ಣ ತಂಗಿ ಸಾವು ಪ್ರಕರಣ: ತಲಾ 5 ಲಕ್ಷ ರೂ. ಪರಿಹಾರ ಘೋಷಣೆ BDA...
Home Front Page ಕೆರೆಯಲ್ಲಿ ಬಿದ್ದು ಅಣ್ಣ ತಂಗಿ ಸಾವು ಪ್ರಕರಣ: ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಕೆರೆಯಲ್ಲಿ ಬಿದ್ದು ಅಣ್ಣ ತಂಗಿ ಸಾವು ಪ್ರಕರಣ: ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

courtesy: TOI

ಬೆಂಗಳೂರು,ಅಕ್ಟೊಬರ್, 23,2024 (www.justkannada.in): ಬೆಂಗಳೂರಿನ ಕೆಂಗೇರಿ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಣ್ಣ-ತಂಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಮೃತರ ಕುಟುಂಬಕ್ಕೆ ತಲ 5 ಲಕ್ಷ ರೂ. ಪರಿಹಾರವನ್ನ ಡಿಸಿಎಂ ಡಿಕೆ ಶವಕುಮಾರ್ ಘೋಷಣೆ ಮಾಡಿದ್ದಾರೆ.

ಮೃತ ಅಣ್ಣ ತಂಗಿಯ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಬಿಎಂಪಿ ಹಾಗೂ ಅವರಿಂದ ಸೇರಿ ಒಟ್ಟು 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತೆ.  ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಎಸ್ ಟಿ ಸೋಮಶೇಖರ್ ಅವರ ಜೊತೆಗೆ ಈ ಕುರಿತು ಮಾತನಾಡಿದ್ದೇನೆ ಎಂದರು.

ನಿನ್ನೆ ನಾಗಮ್ಮ ಪುತ್ರಿ ಮಹಾಲಕ್ಷ್ಮಿ ಹಾಗೂ ಪುತ್ರ ಜಾನ್ ಸೀನ ಇಬ್ಬರು ಕೈತೊಳೆಯಲು  ಕೆರೆಯ ಬಳಿ ಹೋಗಿದ್ದು ಈ ವೇಳೆ ಆಕಸ್ಮಿಕವಾಗಿ ಮಹಾಲಕ್ಷ್ಮಿ ಕೆರೆಗೆ ಬಿದ್ದಿದ್ದಳು. ಈ ವೇಳೆ ತಂಗಿಯ ರಕ್ಷಣೆಗೆ ಕೆರೆಗೆ ಇಳಿದಿದ್ದ ಅಣ್ಣ ಜಾನ್ ಸೆನಾ ಕೂಡ  ನೀರುಪಾಲಾಗಿದ್ದನು.

Key words: death, brother, sister, lake: Rs 5 lakh, compensation