ತಡೆರಹಿತ ವಿದ್ಯುತ್‌ ಪೂರೈಕೆಗೆ ‘ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳ’ ನಿಯೋಜನೆ-ಸಚಿವ ಕೆ.ಜೆ ಜಾರ್ಜ್‌

ಬೆಂಗಳೂರು, ಏಪ್ರಿಲ್,1,2024 (www.justkannada.in):  ನಿರಂತರ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು ಮೈಸೂರು ಮತ್ತು ಗುಲ್ಬರ್ಗ ಪ್ರದೇಶಗಳ 400 ಕೆ.ವಿ.ವರೆಗಿನ ಪ್ರಸರಣ ಮಾರ್ಗಗಳು ಮತ್ತು ಸಬ್‌ಸ್ಟೇಷನ್‌ಗಳ ನಿರ್ವಹಣೆಗಾಗಿ ಎರಡು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳನ್ನು ನಿಯೋಜಿಸಲಿದೆ.

“ಸಾಮಾನ್ಯವಾಗಿ ವಿದ್ಯುತ್‌ ಮಾರ್ಗಗಳ ನಿರ್ವಹಣೆಗಾಗಿ ತಾಸುಗಟ್ಟಲೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಬೇಕಾಗುತ್ತದೆ. ಆದರೆ, ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳ ಬಳಕೆಯಿಂದ ಗ್ರಾಹಕರಿಗೆ ತಡೆರಹಿತ ವಿದ್ಯುತ್‌ ಪೂರೈಕೆ ಸಾಧ್ಯವಾಗಲಿದೆ. ಹಾಗಾಗಿ ಈ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗುತ್ತಿದೆ,”ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಬೆಂಗಳೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಈಗಾಗಲೇ ಇಂತಹ ಮೂರು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ  ಕೆಪಿಟಿಸಿಎಲ್‌ ಗೆ ಕೋಟ್ಯಂತರ ರೂಪಾಯಿಗಳ ಉಳಿತಾಯವಾಗುತ್ತದೆ,” ಎಂದು ಇಂಧನ ಸಚಿವ ಕೆ.ಜೆ ಜಾರ್ಜ್‌ ತಿಳಿಸಿದ್ದಾರೆ.

“ಸಾಂಪ್ರದಾಯಿಕ ವಿಧಾನದಲ್ಲಿ ಪ್ರಸರಣ ಮಾರ್ಗಗಳ ದುರಸ್ತಿ ಅಥವಾ ನಿರ್ವಹಣೆಗೆ ವಿದ್ಯುತ್ ಲೈನ್ ಸ್ಥಗಿತಗೊಳಿಸುವುದು ಅನಿವಾರ್ಯ. ಅದೇ ರೀತಿ ಸ್ಥಗಿತಗೊಂಡ ವಿದ್ಯುಚ್ಛಕ್ತಿಯ  ಮರುಸ್ಥಾಪನೆಗೆ  ಕನಿಷ್ಠ  5 ಗಂಟೆಗಳ ಕಾಲಾವಕಾಶ ಬೇಕು. ಆದರೆ, ಹಾಟ್ (ಲೈವ್) ಲೈನ್ ನಿರ್ವಹಣೆ ತಂತ್ರಜ್ಞಾನದ ಅತ್ಯಾಧುನಿಕ ಇನ್ಸುಲೇಟೆಡ್ ಬಕೆಟ್ ವ್ಯಾನ್, ಇನ್ಸುಲೇಟೆಡ್ ಬಕೆಟ್ ಮತ್ತು ಇನ್ಸುಲೇಟೆಡ್ ಸ್ಕ್ಯಾಫೋಲ್ಡಿಂಗ್ ಬಳಕೆಯಿಂದ  ವಿದ್ಯುತ್‌ ಸ್ಥಗಿತಗೊಳಿಸದೆ ನಿರ್ವಹಣಾ ಚಟುವಟಿಕೆಯನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಗ್ರಾಹಕರಿಗೆ ತಡೆ ರಹಿತ ವಿದ್ಯುತ್‌ ಪೂರೈಕೆ ಜತೆಗೆ ವಿದ್ಯುತ್‌ ಕಂಪನಿಗಳ ನಿರ್ವಹಣಾ ವೆಚ್ಚವನ್ನೂ ಕಡಿತಗೊಳಿಸುವ ಈ ತಂತ್ರಜ್ಞಾನದ ಬಳಕೆಗೆ ಕೆಪಿಟಿಸಿಎಲ್ ಮುಂದಾಗಿದೆ,” ಎಂದು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ವಿವರಿಸಿದರು.

“ಈ ತಂತ್ರಜ್ಞಾನದ ಬಳಕೆಗೆ ಕೆಪಿಟಿಸಿಎಲ್ ಈಗಾಗಲೇ 15 ಸಿಬ್ಬಂದಿಯನ್ನು ಗುರುತಿಸಿದ್ದು, ಅವರು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ ಫಾರ್ಮ್ ವಾಹನಗಳನ್ನು ನಿರ್ವಹಿಸಲು ವೃತ್ತಿಪರ ತರಬೇತಿಯನ್ನು ಪಡೆದಿದ್ದಾರೆ. ಬ್ರೆಜಿಲ್‌ನಿಂದ ಈ ವಾಹನಗಳನ್ನು ಆಮದು ಮಾಡಿಕೊಳ್ಳಲಾಗಿದೆ,”ಎಂದು ಅವರು ಹೇಳಿದರು.

ನಿರಂತರ ವಿದ್ಯುತ್ ಪೂರೈಕೆಯ ಖಾತರಿಗಾಗಿ 220 ಕೆ.ವಿ. ಸಾಮರ್ಥ್ಯದ ನೆಲಮಂಗಲ ಸ್ಥಾವರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರು,’ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್’ ವಾಹನವನ್ನು ಪರಿಶೀಲಿಸಿ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

ENGLISH SUMMARY..

KPTCL guns big on technology, deploys Insulated Aerial Work Platform vehicles for seamless power supply – Energy Minister K.J George

Bengaluru, April 1, 2024 – In a bid to provide uninterrupted power supply to consumers and prevent the shutdown of power lines during maintenance, Karnataka Power Transmission Corporation Ltd has decided to import and deploy two additional Insulated Aerial Work Platform vehicles for transmission lines and substations up to 400Kv voltage in the Mysore and Gulbarga region.

“Karnataka has taken adequate steps, chalked out all remedial measures, and is fully geared to meet the state’s energy requirements during the upcoming summer months. I have instructed Energy Department officials to ensure uninterrupted power is supplied to students preparing for exams and seven-hour uninterrupted power supply to farmers in the State, Energy Minister K J George said.

The Karnataka Power Transmission Company Limited, KPTCL, already has three such Insulated Aerial Work Platform vehicles operating in Bengaluru, Chitradurga, and Hubli. Pankaj Kumar Pandey, Managing Director of KPTCL, said today that these vehicles will enable uninterrupted power supply to consumers and save crores of rupees for KPTCL.

Traditional maintenance needs to shut down the power line. The minimum time needed to restore the power is 5 hours post-shutdown, thereby causing inconvenience to these consumers. With the Hot (Live) Line maintenance technique, KPTCL intends to carry out the maintenance activity without shutting down using state-of-the-art tools like an Insulated bucket van, insulated bucket, and insulated scaffolding, thus not only ensuring the power supply to the consumers and also keeping the ESCOMs financial position intact, Pankaj Kumar Pandey added.

KPTCL has also identified 15 personnel, who have received professional training to operate and maintain the Insulated Aerial Work Platform vehicles bare-handed.

To ensure the power supply is uninterrupted, KPTCL MD Pankaj Kumar Pandey also visited the 220 KV Nelamangala plant, inspected the Insulated Aerial Work Platform vehicle at work, and interacted with KPTCL personnel.

Key words: KPTCL, power, Minister, K.J George