ನಾಳೆ ಕೆಪಿಸಿಎಲ್ 56ನೇ ಸಂಸ್ಥಾಪನಾ ದಿನ: ಪ್ರತಿಭಾ ಪುರಸ್ಕಾರ, ಹಿರಿಯ ಸಿಬ್ಬಂದಿಗೆ ಸನ್ಮಾನ

ಬೆಂಗಳೂರು, ಜುಲೈ, 22, 2025 (www.justkannada.in): ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ದ 56ನೇ ಸಂಸ್ಥಾಪನಾ ದಿನವನ್ನು ಬುಧವಾರ (ಜುಲೈ 23) ಆಯೋಜಿಸಲಾಗಿದೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಇಂಧನ ಸಚಿವ ಕೆ.ಜೆ.ಜಾರ್ಜ್, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳೂ ಆಗಿರುವ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಗೌರವ್ ಗುಪ್ತ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಇದೇ ವೇಳೆ ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿದ ಹಿರಿಯ ಸಿಬ್ಬಂದಿಯನ್ನು ಗೌರವಿಸಲಾಗುತ್ತದೆ ಹಾಗೂ ನಿವೃತ್ತ ಸಿಬ್ಬಂದಿಯನ್ನು ಸನ್ಮಾನಿಸಲಾಗವುದು. ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ನಿಗಮದ ಸಿಬ್ಬಂದಿಯ ಮಕ್ಕಳಿಗೆ ಚಿನ್ನದ ನಾಣ್ಯಗಳನ್ನು ನೀಡಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.vtu

ENGLISH SUMMARY..

KPCL to celebrate 56th Foundation Day on July 23

Bengaluru, July 22, 2025: Karnataka Power Corporation Limited (KPCL), a state-owned enterprise, will celebrate its 56th Foundation Day on Wednesday, July 23, at 5 PM at Gyanjyothi Hall, Bengaluru.

The event will be inaugurated by Chief Minister Siddaramaiah in the presence of Energy Minister, Mr. K.J. George, Mr. Gaurav Gupta, Additional Chief Secretary, Energy Department and Managing Director, KPCL, and other dignitaries.

As part of the celebration, KPCL will honor senior employees who have completed 25 years of service and felicitate retired staff. Additionally, students—children of KPCL staff—who scored above 90% in SSLC and II PUC exams will be presented with gold coins and talent awards in recognition of their academic excellence.

Key words: KPCL, 56th Founding Day, Bangalore